ಜಬಲ್ಪುರ (ಮಧ್ಯ ಪ್ರದೇಶ):ಉದ್ಯಮಿಯೊಬ್ಬರ 13 ವರ್ಷದ ಮಗನನ್ನು ಅಪಹರಿಸಿ 2 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿರುವ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ.
ಅಪಹರಣಕ್ಕೊಳಗಾದ ಮಗುವಿನ ತಂದೆ ದೂರು ನೀಡಿದ ನಂತರ ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಧನ್ವಂತರಿ ನಗರದಲ್ಲಿರುವ ನಿವಾಸದಿಂದ ಸಂಜೆ 6 ಗಂಟೆ ಸಮಯದಲ್ಲಿ ದಿನಸಿ ಸಾಮಗ್ರಿಗಳನ್ನು ತೆಗೆದುಕೊಂಡು ಬರಲು ಹೊರ ಬಂದಾಗ ಬಾಲಕನ ಅಪಹರಣ ನಡೆದಿದೆ.