ಕರ್ನಾಟಕ

karnataka

ETV Bharat / bharat

ತಾಯಿ 200 ರೂ.ನೀಡಲಿಲ್ಲ ಎಂಬ ಕಾರಣಕ್ಕೆ ಮಗ ಆತ್ಮಹತ್ಯೆ - maharashtra wardha

ತಾಯಿ 200 ರೂಪಾಯಿ ನೀಡಲಿಲ್ಲ ಎಂಬ ಕಾರಣಕ್ಕೆ ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಸಂಜೆ ವಾರ್ಧಾದಲ್ಲಿನ ಪಂಜಾಬ್ ಕಾಲೋನಿಯಲ್ಲಿ ನಡೆದಿದೆ.

succide
ಆತ್ಮಹತ್ಯೆ ಮಾಡಿಕೊಂಡ ಯುವಕ

By

Published : Jun 6, 2020, 8:32 AM IST

ವಾರ್ಧಾ (ಮಹಾರಾಷ್ಟ್ರ): ತಾಯಿ ಹಣ ನೀಡದ ಕಾರಣ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ವಾರ್ಧಾದಲ್ಲಿ ಸಂಭವಿಸಿದೆ.

ಸರ್ವೇಶ್ ಇಂಗ್ಲೆ (18) ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ. ಸರ್ವೇಶ್ ಇಂಗ್ಲೆಯ ತಂದೆ ಗಡ್ಚಿರೋಲಿ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದು, ಕೆಲಸದ ಕಾರಣ ಹಲವು ದಿನಗಳಿಂದ ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ಇನ್ನು ಯುವಕ ಗುರುವಾರ ಬೆಳಗ್ಗೆ ತನ್ನ ತಾಯಿಯಿಂದ 200 ರೂ ನೀಡುವಂತೆ ಕೇಳಿಕೊಂಡಿದ್ದಾನೆ. ಆದರೆ, ತಾಯಿ ಹಣ ನೀಡಲು ನಿರಾಕರಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಯುವಕ ತಾಯಿಯೊಂದಿಗೆ ಜಗಳವಾಡಿದ್ದಾನೆ.

ತಾಯಿ 200 ರೂಪಾಯಿ ನೀಡದ ಕಾರಣ ಮಗ ಆತ್ಮಹತ್ಯೆ

ಇನ್ನು ತಾಯಿ ಹಣ ನೀಡಲು ನಿರಾಕರಿಸಿದ ಕಾರಣ ಯುವಕ ತಂದೆಗೆ ಕರೆ ಮಾಡಿ ತಂದೆಯ ಮೇಲೂ ಕೋಪ ತೋಡಿಕೊಂಡಿದ್ದಾನೆ. ಸ್ವಲ್ಪ ಸಮಯದ ಬಳಿಕ ತಂದೆ ಮಗನಿಗೆ ಕರೆ ಮಾಡಿ ಹಣವನ್ನು ಕಳುಹಿಸಿದ್ದೇನೆ ಎಂದು ಹೇಳಿದರು. ಆದರೆ ಅವನು ಹಣ ಬೇಡವೆಂದು ಹೇಳಿ ಫೋನ್​ ಕಟ್​ ಮಾಡಿದ್ದಾನೆ.

ಇನ್ನು ಪೊಲೀಸರು ಇದನ್ನು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿದ್ದಾರೆ. ಮೊದಲೇ 200 ರೂಪಾಯಿ ನೀಡದ ಕಾರಣ ಕೋಪದಿಂದ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.

ABOUT THE AUTHOR

...view details