ಆಂಧ್ರಪ್ರದೇಶ: ತಾಯಿ ಸಾವನ್ನಪ್ಪಿದ ಒಂದೇ ಗಂಟೆಯಲ್ಲಿ ಮಗನೂ ಕೊನೆಯುಸಿರೆಳೆದಿರುವ ಹೃದಯವಿದ್ರಾವಕ ಘಟನೆ ಆಂಧ್ರ ಪ್ರದೇಶದ ವಿಜಯನಗರಂ ಜಿಲ್ಲೆಯ ಸಿರಿಪುರಂನಲ್ಲಿ ನಡೆದಿದೆ.
ತಾಯಿ ನಿಧನದ ಸುದ್ದಿ ಕೇಳಿ 'ಕರುಳಿನ ಕುಡಿ'ಯೂ ಸಾವು! - ವಿಜಯನಗರಂ ಜಿಲ್ಲೆ
ತಾಯಿ ಸಾವನ್ನಪ್ಪಿದ ಒಂದೇ ಗಂಟೆಯಲ್ಲಿ ಮಗನೂ ಕೊನೆಯುಸಿರೆಳೆದಿರುವ ಘಟನೆ ಆಂಧ್ರ ಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ ನಡೆದಿದೆ.
ತಾಯಿ-ಮಗ ಸಾವು
ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ಅಚಮ್ಮ (70) ಸಾವನ್ನಪ್ಪಿದ್ದಾರೆ. ತಾಯಿಯ ಮರಣದ ಸುದ್ದಿ ಕೇಳಿದ ಮಗ ಡೆಮುಡು (50)ದುಃಖವನ್ನು ಸಹಿಸಲಾಗದೆ ಮೃತಪಟ್ಟಿದ್ದಾರೆ.
ಇನ್ನು ದೇಮುಡು ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಒಬ್ಬಾಕೆಗೆ ಅಕ್ಟೋಬರ್ 23ರಂದು ವಿವಾಹ ನಿಶ್ಚಯವಾಗಿದೆ. ಸದ್ಯ ಘಟನೆಯಿಂದ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.