ಕೋಲ್ಕತ್ತಾ:ಕೇಂದ್ರ ಮಾಜಿ ಸಚಿವ ಚಿದಂಬರಂ ವಿಚಾರದಲ್ಲಿ ಅನುಸರಿಸಿದ ಕ್ರಮ ನೋವನ್ನುಂಟುಮಾಡಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.
ಚಿದಂಬರಂ ವಿಚಾರದಲ್ಲಿ ಅನುಸರಿಸಿದ ಕ್ರಮ ನೋವು ತಂದಿದೆ: ದೀದಿ - ಮುಖ್ಯಮಂತ್ರಿ ಮಮತ ಬ್ಯಾನರ್ಜಿ
ಸಿಬಿಐ, ಕೇಂದ್ರ ಮಾಜಿ ಸಚಿವ ಚಿದಂಬರಂ ರನ್ನು ವಶಕ್ಕೆ ಪಡೆದ ಹಿನ್ನಲೆ ಪ್ರತಿಕ್ರಿಯಿಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಚಿದಂಬರಂ ವಿಚಾರದಲ್ಲಿ ಅನುಸರಿಸಿದ ಕ್ರಮ ನೋವನ್ನುಂಟುಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಚಿದಂಬರಂ ಅವರನ್ನು ಸಿಬಿಐ ವಶಕ್ಕೆ ಪಡೆದ ಹಿನ್ನೆಲೆ ಮಾಧ್ಯಮದೊಂದಿಗೆ ಮಾತನಾಡಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನಾನು ಕಾನೂನಿನ ಬಗ್ಗೆ ಮಾತನಾಡುತ್ತಿಲ್ಲ. ಆದ್ರೆ ಕೆಲವೊಮ್ಮೆ ಅನುಸರಿಸುವ ಪ್ರಕ್ರಿಯೆ ತಪ್ಪಾಗಿರುತ್ತವೆ ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಅವರು, ಚಿದಂಬರಂ ಒಬ್ಬ ಹಿರಿಯ ರಾಜಕಾರಣಿ. ಜೊತೆಗೆ ಮಾಜಿ ಹಣಕಾಸು ಮಂತ್ರಿ ಮತ್ತು ಗೃಹ ಸಚಿವರು ಆಗಿದ್ದವರು. ಕಾನೂನುಬದ್ಧವಾಗಿ ಅವರನ್ನು ವಶಕ್ಕೆ ಪಡೆದುಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಅವರ ವಿಚಾರದಲ್ಲಿ ಅನುಸರಿಸಿದ ಪ್ರಕ್ರಿಯೆ ಸರಿ ಕಾಣಿಸಲಿಲ್ಲ. ಇದು ತುಂಬಾ ತಪ್ಪು ಕ್ರಮ ಹಾಗೂ ದುಖಃವನ್ನುಂಟುಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.