ಪಾಟ್ನಾ:ಅಸ್ಸೋಂ ರಾಜ್ಯ ಪ್ರವಾಹಕ್ಕೆ ನಲುಗಿ ಹೋಗಿದೆ. ಈಗ ಬಿಹಾರದ ಸರದಿ. ಇಲ್ಲಿನ ಮುಜಾಫರ್ಪುರ ಕತ್ರಾ ವಿಭಾಗ ಭಾರಿ ಪ್ರವಾಹ ಪರಿಸ್ಥಿತಿಯನ್ನ ಎದುರಿಸುತ್ತಿದೆ.
ಅಸ್ಸೋಂ ನಂತರ ಈಗ ಈ ರಾಜ್ಯದಲ್ಲೂ ಭಾರಿ ಪ್ರವಾಹ: ಕೊಚ್ಚಿಹೋದ ಸೇತುವೆ
ಭಾರಿ ಮಳೆಯಿಂದಾಗಿ ಇಲ್ಲಿನ ನದಿ ತುಂಬಿ ಹರಿಯುತ್ತಿದ್ದು, ಅಪಾಯದ ಮಟ್ಟವನ್ನೂ ಮೀರಿದೆ. ಪರಿಣಾಮ ತಾತ್ಕಾಲಿಕ ಅಣೆಕಟ್ಟು ಒಡೆದು, ಅಪಾರ ನಷ್ಟಕ್ಕೆ ಕಾರಣವಾಗಿದೆ.
ಭಾರಿ ಪ್ರವಾಹ
ಭಾರಿ ಮಳೆಯಿಂದಾಗಿ ಇಲ್ಲಿನ ನದಿ ತುಂಬಿ ಹರಿಯುತ್ತಿದ್ದು ಅಪಾಯದ ಮಟ್ಟವನ್ನೂ ಮೀರಿದೆ. ಪರಿಣಾಮ ಇಲ್ಲಿನ ಮೇಕ್ಶಿಫ್ಟ್ ತಾತ್ಕಾಲಿಕ ಅಣೆಕಟ್ಟು ಒಡೆದು ಹೋಗಿದೆ. ಹೀಗಾಗಿ ಈ ಭಾಗದ ಗ್ರಾಮಗಳ ಜನರನ್ನ ಸುರಕ್ಷಿತ ಸ್ಥಳಗಳಿಗೆ ರವಾನೆ ಮಾಡಲಾಗಿದೆ. ತಕ್ಷಣವೇ ಒಡೆದ ತಾತ್ಕಾಲಿಕ ಅಣೆಕಟ್ಟೆಯನ್ನ ಸ್ಥಳೀಯ ಆಡಳಿತ ದುರಸ್ಥಿ ಮಾಡಿದೆ.