ಮಧುರೈ: ಭಾರತ- ಚೀನಾ ಕಾದಾಟದಲ್ಲಿ ವೀರ ಮರಣವನ್ನಪ್ಪಿದ ಯೋಧ ಹವಾಲ್ದಾರ್ ಕೆ. ಪಳನಿ ಪಾರ್ಥಿವ ಶರೀರ ಮಧುರೈನ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.
ಮಧುರೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಹುತಾತ್ಮ ಯೋಧ ಪಳನಿ ಪಾರ್ಥಿವ ಶರೀರ - soldier palani's body
ಭಾರತ- ಚೀನಾ ಕಾದಾಟದಲ್ಲಿ ವೀರ ಮರಣವನ್ನಪ್ಪಿದ ಯೋಧ ಹವಾಲ್ದಾರ್ ಕೆ. ಪಳನಿ ಪಾರ್ಥಿವ ಶರೀರ ಮಧುರೈನ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.
![ಮಧುರೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಹುತಾತ್ಮ ಯೋಧ ಪಳನಿ ಪಾರ್ಥಿವ ಶರೀರ ಮಧುರೈ ವಿಮಾನ ನಿಲ್ದಾಣಕ್ಕೆ ತಲುಪಿದ ಹುತಾತ್ಮ ಯೋಧ ಪಳನಿ ಪಾರ್ಥೀವ ಶರೀರ](https://etvbharatimages.akamaized.net/etvbharat/prod-images/768-512-7662672-thumbnail-3x2-mng.jpg)
ಮಧುರೈ ವಿಮಾನ ನಿಲ್ದಾಣಕ್ಕೆ ತಲುಪಿದ ಹುತಾತ್ಮ ಯೋಧ ಪಳನಿ ಪಾರ್ಥೀವ ಶರೀರ
ಮಧುರೈನ ಡಿಸಿ ಟಿ.ಜಿ. ವಿನಯ್, ಮಧುರೈ ವಿಮಾನ ನಿಲ್ದಾಣ ನಿರ್ದೇಶಕ ಎಸ್.ಶೆಂಥಿಲ್ ವಲವಾನ್, ಆಯುಕ್ತ ಡೇವಿಡ್ಸನ್ ದೇವಸಿರ್ವಥಮ್, ದಕ್ಷಿಣ ವಲಯದ ಐಜಿ ಕೆ.ಪಿ. ಷಣ್ಮುಗ ರಾಜೇಶ್ವರನ್, ಡಿಐಜಿ (ಮಧುರೈ ಶ್ರೇಣಿ) ಅನ್ನಿ ವಿಜಯ, ಮಧುರೈ ಎಸ್ಪಿ ಮಣಿವಣ್ಣನ್, ಮಧುರೈ ಸಂಸದ ಸು.ವೆಂಕಟೇಶನ್ ಮತ್ತು ತಿರುಪರಂಕುಂದ್ರಂ ಶಾಸಕ ಸರವಣನ್ ಅಂತಿಮ ನಮನ ಸಲ್ಲಿಸಿದರು.
ಹುತಾತ್ಮ ಯೋಧ ಪಳನಿ ಪಾರ್ಥಿವ ಶರೀರವನ್ನು ಸ್ವಗ್ರಾಮವಾದ ರಾಮನಾಥಪುರಂಗೆ ತೆಗೆದುಕೊಂಡು ಹೋಗಲಾಗಿದ್ದು, ಇಂದೇ ಮಿಲಿಟರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನಡೆಯಲಿದೆ.