ನಾರಾಯಣಪುರ (ಛತ್ತೀಸ್ ಗಡ) :ಪೊಲೀಸರು ಮತ್ತು ನಕ್ಸಲೇಟ್ ಬಂಡುಕೋರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಯೋಧ ಹುತಾತ್ಮನಾಗಿದ್ದಾನೆ.
ನಾರಾಯಣಪುರದ ಓರ್ಚಾದ ಕಡೇರ್ ಕಾಡಿನಲ್ಲಿ ಪೊಲೀಸರು ನಕ್ಸಲ್ ವಿರೋಧಿ ಸ್ಥಳಗಳ ಶೋಧ ಕಾರ್ಯಚರಣೆಯಲ್ಲಿ ತೊಡಗಿದ್ದರು. ಈ ವೇಳೆ ಪೊಲೀಸರು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಯೋಧನೋರ್ವ ಹುತಾತ್ಮನಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.