ರಾಂಚಿ (ಜಾರ್ಖಂಡ್): ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಸೇನೆಯಲ್ಲಿ ರೇಡಿಯೋ ಆಪರೇಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ಯೋಧ ಕೊರೊನಾಗೆ ಬಲಿಯಾಗಿದ್ದಾರೆ.
ಯೋಧನನ್ನು ಬಲಿ ಪಡೆದ ಮಹಾಮಾರಿ ಕೊರೊನಾ - ‘ಜಾರ್ಖಂಡ್ನ ರಾಂಚಿ
ಜಾರ್ಖಂಡ್ನ ರಾಂಚಿ ನಿವಾಸಿ ಮೂಲದ ಭಾರತೀಯ ಸೇನೆಯ ಯೋಧ ಕೋವಿಡ್ನಿಂದಾಗಿ ಮೃತಪಟ್ಟಿದ್ದಾರೆ.
ಯೋಧನನ್ನು ಬಲಿ ಪಡೆದ ಮಹಾಮಾರಿ ಕೊರೊನಾ
ಜಾರ್ಖಂಡ್ನ ರಾಂಚಿ ನಿವಾಸಿಯಾಗಿರುವ ಅರವಿಂದ್ ಕುಮಾರ್ ಮಿಶ್ರಾ (34) ಮೃತ ಯೋಧ. ಕೋವಿಡ್ ಸೋಂಕು ತಗುಲಿ ಶ್ರೀನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನನ್ನ ಮಗ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ ಎಂದು ಸೇನೆಯಿಂದ ಮಾಹಿತಿ ನೀಡಿದ್ದಾರೆ ಎಂದು ಅರವಿಂದ್ ಅವರ ತಂದೆ ಚಂದ್ರ ಭೂಷಣ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.
2005 ರಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅರವಿಂದ್ ಕುಮಾರ್ ಮಿಶ್ರಾ, 2016 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.