- ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಜೀವಂತವಾಗಿರುವ ಒನಕೆ ಗ್ರಹಣ ಪರೀಕ್ಷೆ
- ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ವಿವಿಧೆಡೆ ಒನಕೆ ನಿಲ್ಲಿಸಿದ್ದ ಜನರು
- ಗ್ರಹಣ ಮುಗಿಯುವ ವರೆಗೂ ಹಾಗೇ ನಿಲ್ಲುವ ಒನಕೆ
- ಗ್ರಹಣ ಮುಗಿದ ಬಳಿಕ ತನ್ನಿಂದ ತಾನೇ ಕೆಳಗೆ ಬಿದ್ದಿತು
'ಬೆಂಕಿಯ ಉಂಗುರ': ದೇಶದ ವಿವಿಧೆಡೆ ವರ್ಣರಂಜಿತ ರವಿಯ ಕಣ್ತುಂಬಿಕೊಂಡ ಜನತೆ
14:53 June 21
ಗ್ರಹಣ ಮುಗಿಯುತ್ತಿದ್ದಂತೆ ಕೆಳಗೆ ಬಿತ್ತು ಒನಕೆ..!
14:52 June 21
ಮೋಡದೊಳಗೆ ಸೂರ್ಯ..
- ಮಂಡ್ಯದಲ್ಲಿ ಮೋಡ ಮುಸುಕಿದ ವಾತಾವರಣದಲ್ಲಿ ಗೋಚರಿಸಿದ ಗ್ರಹಣ
- ನಗರದ ವಿಜ್ಞಾನ ಕೇಂದ್ರದಿಂದ ಸರ್.ಎಂ.ವಿ ಕ್ರೀಡಾಂಗಣದಲ್ಲಿ ಗ್ರಹಣ ವೀಕ್ಷಣೆಗೆ ಅವಕಾಶ
14:52 June 21
ಬೆಂಗಳೂರಿನಲ್ಲಿ ಕಿತ್ತಳೆ ಬಣ್ಣದಲ್ಲಿ ಗೋಚರಿಸಿದ ಸೂರ್ಯ
- ರಾಜಧಾನಿ ಬೆಂಗಳೂರಿನಲ್ಲಿ ಗ್ರಹಣ ವೀಕ್ಷಣೆ
- ನಗರದ ವಿವಿಧೆಡೆ ಗ್ರಹಣ ವೀಕ್ಷಿಸಿದ ಜನರು
- ಕಿತ್ತಳೆ ಬಣ್ಣದಲ್ಲಿ ಗೋಚರಿಸಿದ ಸೂರ್ಯ
14:07 June 21
ಓಡುವ ಮೋಡಗಳ ನಡುವೆ ಕಂಕಣ ಗ್ರಹಣ
- ಗದಗನಲ್ಲಿ ಕಂಕಣ ಸೂರ್ಯಗ್ರಹಣ
- ಗ್ರಹಣದ ಸುಂದರ ನೋಟ ಕ್ಯಾಮರಾದಲ್ಲಿ ಸೆರೆ
- ಓಡುವ ಮೋಡಗಳ ನಡುವೆ ಕೆಂಡದಂತೆ ಕಂಡ ನೇಸರ
13:19 June 21
ಹುಬ್ಬಳ್ಳಿ ಈಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ
- ರಾಹುಗ್ರಸ್ಥ ಚೂಡಾಮಣಿ ಸೂರ್ಯಗ್ರಹಣ ಹಿನ್ನೆಲೆ
- ಹುಬ್ಬಳ್ಳಿ ಈಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ
- ನಗರದ ಸ್ಟೇಷನ್ ರಸ್ತೆಯಲ್ಲಿರುವ ಶಿವ ದೇಗುಲ
- ಗ್ರಹಣ ಪ್ರಾರಂಭಕ್ಕೂ ಮುನ್ನ ಹೋಮ-ಹವನ
13:14 June 21
ಕೊಪ್ಪಳ, ವಿಜಯಪುರದಲ್ಲಿ ಸೂರ್ಯಗ್ರಹಣ ವೀಕ್ಷಣೆ
- ಕೊಪ್ಪಳದ ಗಂಗಾವತಿಯಲ್ಲಿ ಸೂರ್ಯಗ್ರಹಣ ವೀಕ್ಷಣೆ
- ಎಪಿಎಂಸಿಯ ಆವರಣದಲ್ಲಿರುವ ಶ್ರಮಿಕ ಕಾಲೋನಿಯ ಸರ್ಕಾರಿ ಹಿರಿಯ ಪ್ರೌಢ ಶಾಲೆಯಲ್ಲಿ ವೀಕ್ಷಣೆಗೆ ಅವಕಾಶ
- ವಿಜ್ಞಾನ ವಿಭಾಗದ ಶಿಕ್ಷಕರಿಂದ ಏರ್ಪಾಡು
- ಸೌರಫಲಕ, ಕಪ್ಪು ಕನ್ನಡಕದ ಮೂಲಕ ಗ್ರಹಣ ವೀಕ್ಷಿಸಿದ ವಿವಿಧ ಇಲಾಖೆಯ ಅಧಿಕಾರಿಗಳು
- ವಿಜಯಪುರದಲ್ಲಿ ವೆಬಿನಾರ್ ಮೂಲಕ ಗ್ರಹಣ ವೀಕ್ಷಣೆ
- ವಿಜ್ಞಾನ ಚಟುವಟಿಕಾ ಕೇಂದ್ರದಲ್ಲಿ ವೀಕ್ಷಣೆಗೆ ಅವಕಾಶ
- ಕೊರೊನಾ ಭೀತಿ ಹಿನ್ನೆಲೆ ಆನ್‌ಲೈನ್ ಮೂಲಕ ಕಂಕಣ ಸೂರ್ಯಗ್ರಹಣ ಕುರಿತು ಮಾಹಿತಿ
13:05 June 21
ಹಾಸನದ ದೇವಾಲಯಗಳು ಬಂದ್
- ಕಂಕಣ ಸೂರ್ಯ ಗ್ರಹಣದ ಹಿನ್ನೆಲೆ
- ಹಾಸನದ ಬೇಲೂರಿನ ಚನ್ನಕೇಶವ ದೇವಾಲಯ ಸೇರಿದಂತೆ ಜಿಲ್ಲೆಯ ಎಲ್ಲಾ ದೇವಸ್ಥಾನಗಳು 3 ಗಂಟೆ ತನಕ ಬಂದ್
- ರಾಮನಾಥಪುರದ ರಾಮೇಶ್ವರ, ಶ್ರವಣಬೆಳಗೊಳದ ಜಿನಮಂದಿರ ಚಂದ್ರಗಿರಿ ಮತ್ತು ವಿಂಧ್ಯಗಿರಿ,ಅರಸಿಕೆರೆಯ ಮಾಲೇಕಲ್ ತಿರುಪತಿ ಜೇನುಗಿರಿ ಬೆಟ್ಟ, ಗರುಡನ ಗಿರಿಬೆಟ್ಟ,
- ಸಕಲೇಶಪುರದ ಸಕಲೇಶ್ವರ ದೇವಾಲಯ, ಹೊಳೆಮಲ್ಲೇಶ್ವರ ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯ ದೊಡ್ಡಗದ್ದವಳ್ಳಿ ಲಕ್ಷ್ಮಿ ದೇವಾಲಯದ ಬಾಗಿಲು ಕ್ಲೋಸ್
- ಸೂರ್ಯಗ್ರಹಣ ವೀಕ್ಷಣೆಗೆ ಹಾಸನದ ಭಾರತ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣ ಸೇರಿದಂತೆ ಹಲವು ಕಡೆ ವ್ಯವಸ್ಥೆ
12:48 June 21
ನೇಪಾಳದ ಕಠ್ಮಂಡುವಿನಲ್ಲಿ ಗ್ರಹಣ ಗೋಚರ
ನೇಪಾಳದಲ್ಲಿ ಬೆಳಗ್ಗೆ 10:52 ರಿಂದ ಸೂರ್ಯಗ್ರಹಣ ಆರಂಭ
ಮಧ್ಯಾಹ್ನ 2:32 ರವರೆಗೆ ಗೋಚರಿಸಲಿರುವ ಭಾನು
ಕಠ್ಮಂಡುವಿನಲ್ಲಿ ತಿಳಿ ಕಿತ್ತಳೆ ಬಣ್ಣದಲ್ಲಿ ಮೂಡಿಬಂದ ಸೂರ್ಯ
12:30 June 21
ದೇಶದ ಹಲವೆಡೆ ಸೂರ್ಯಗ್ರಹಣ ಗೋಚರ
ಉತ್ತರಾಖಂಡದ ಡೆಹ್ರಾಡೂನ್, ತಮಿಳುನಾಡಿನ ಕೊಯಿಮತ್ತೂರ್, ದೆಹಲಿಯಲ್ಲಿ ಗ್ರಹಣ ಗೋಚರಿಸಿದ್ದು ಹೀಗೆ..
12:19 June 21
ಸುರಪುರದಲ್ಲಿ ಗ್ರಹಣದ ದೃಶ್ಯ ಈಟಿವಿ ಭಾರತ ಕ್ಯಾಮರಾದಲ್ಲಿ ಸೆರೆ
- ಯಾದಗಿರಿಯ ಸುರಪುರದಲ್ಲಿ ಸೂರ್ಯಗ್ರಹಣ ವೀಕ್ಷಣೆ
- ಟೈಲರ್ ಮಂಜಿಲ್ ಬೆಟ್ಟದ ಮೇಲೆ ನಿಂತು ಗ್ರಹಣ ವೀಕ್ಷಿಸಿದ ಜನರು
- ಗ್ರಹಣದ ದೃಶ್ಯ ಈಟಿವಿ ಭಾರತ ಕ್ಯಾಮರಾದಲ್ಲಿ ಸೆರೆ
12:13 June 21
ವರ್ಣರಂಜಿತ ಸೂರ್ಯ
- ಉತ್ತರಪ್ರದೇಶದ ಲಖ್ನೋದಲ್ಲಿ ಸೂರ್ಯಗ್ರಹಣ
- ಹಸಿರು ಮಿಶ್ರಿತ ಬಿಳಿಯ ವರ್ಣರಂಜಿತ ಸೂರ್ಯ ಗೋಚರ
- ಕಂಕಣ ಸೂರ್ಯ ಗ್ರಹಣ ಕಣ್ತುಂಬಿಕೊಳ್ತಿರುವ ಜನ
12:08 June 21
ದಕ್ಷಿಣ ಕನ್ನಡ, ಚಿಕ್ಕಮಗಳೂರಲ್ಲಿ ಸೂರ್ಯನ ಕಣ್ಣಾಮುಚ್ಚಾಲೆ ಆಟ
- ಮೋಡ ಕವಿದ ವಾತಾವರಣ ಹಿನ್ನೆಲೆ
- ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸರಿಯಾಗಿ ಗ್ರಹಣ ವಿಕ್ಷಣೆ ಮಾಡೋದಕ್ಕೆ ಸಾಧ್ಯವಾಗುತ್ತಿಲ್ಲ
- ಚಿಕ್ಕಮಗಳೂರಲ್ಲಿ ಸೂರ್ಯನ ಕತ್ತಲು-ಬೆಳಕಿನ ಆಟ
- ಒಂದು ಬಾರಿ ಸೂರ್ಯ ಗೋಚರಿಸುತ್ತಿದ್ದಂತೆಯೇ ಕೆಲ ನಿಮಿಷದಲ್ಲಿ ಮೋಡ ಸೂರ್ಯನನ್ನು ಆವರಿಸುತ್ತಿದೆ
- ಮಂಗಳೂರಿನಲ್ಲಿ ಸುರಿಯುತ್ತಿರುವ ಮಳೆಯಿಂದ ಸೂರ್ಯಗ್ರಹಣ ವೀಕ್ಷಣೆಗೆ ಅಡ್ಡಿ
- ಮೋಡದ ನಡುವೆ ಆಗಾಗ ಸೂರ್ಯ ಗೋಚರ
- 11 ಗಂಟೆಯ ಬಳಿಕ ಸಂಪೂರ್ಣ ಮರೆಯಾದ ರವಿ
12:00 June 21
ಕೋಲಾರದಲ್ಲಿ ಶಾಂತಿ ಹೋಮ
- ರಾಹುಗ್ರಸ್ತ ಸೂರ್ಯಗ್ರಹಣ ಹಿನ್ನೆಲೆ
- ಕೋಲಾರದಲ್ಲಿ ಶಾಂತಿ ಹೋಮ
- ನಗರದ ಡೂಂಲೈಟ್ ಸರ್ಕಲ್ ಬಳಿ ಇರುವ ವಿದ್ಯಾಗಣಪತಿ ದೇವಾಲಯದಲ್ಲಿ ಶಾಂತಿ ಪೂಜೆ, ನವಗ್ರಹ ಹೋಮ
11:54 June 21
ದೇಶದ ಹಲವೆಡೆ ಸೂರ್ಯಗ್ರಹಣ ಗೋಚರ
ರಾಜಸ್ಥಾನದ ಜೈಪುರ, ಹರಿಯಾಣದ ಕುರುಕ್ಷೇತ್ರ, ಪಂಜಾಬ್ನ ಅಮೃತಸರದಲ್ಲಿ ಆಗಸದಲ್ಲಿ ರವಿ ಗೋಚರಿಸಿದ್ದು ಹೀಗೆ.
11:48 June 21
ಅಂಗಡಿಗಳು ಬಂದ್
- ಹಳೆ ಸಂತೆಪೇಟೆ ಅಂಗಡಿಗಳು ಬಂದ್
- ಸೂರ್ಯಗ್ರಹಣದ ಹಿನ್ನೆಲೆ
- ಮೈಸೂರಿನ ಹಳೆ ಸಂತೆಪೇಟೆ ಅಂಗಡಿಗಳು ಸಂಪೂರ್ಣ ಬಂದ್
11:37 June 21
ಪಾಕಿಸ್ತಾನದ ಕರಾಚಿಯಲ್ಲಿ ಆಗಸದಲ್ಲಿ ಸೂರ್ಯ ಕಂಡದ್ದು ಹೀಗೆ
- ಪಾಕಿಸ್ತಾನದಲ್ಲಿ ಬೆಳಗ್ಗೆ 8.46ರಿಂದಲೇ ಗ್ರಹಣ ಆರಂಭ
- 11.40ಕ್ಕೆ ಸಂಪೂರ್ಣ ಗೋಚರ
- 2.34ರ ವರೆಗೆ ಕಾಣಿಸಲಿರುವ ರವಿ
11:33 June 21
ಉತ್ತರಾಖಂಡದಲ್ಲಿ ಮೂಡಿಬಂದ ರವಿ
- ಉತ್ತರಾಖಂಡದ ಡೆಹ್ರಾಡೂನ್ನಲ್ಲಿ ಸೂರ್ಯಗ್ರಹಣ ಗೋಚರ
- ಮಧ್ಯಾಹ್ಯ 12:05ಕ್ಕೆ ರಾಜ್ಯದಲ್ಲಿ ಸಂಪೂರ್ಣ ಗ್ರಹಣ ಗೋಚರಿಸಲಿದೆ
- ಮಧ್ಯಾಹ್ಯ 1:50 ವರೆಗೂ ಕಾಣಿಸಲಿದೆ
11:30 June 21
ಕುಂದಾ ನಗರಿಯಲ್ಲಿ ರಾಹುಗ್ರಸ್ತ ಸೂರ್ಯಗ್ರಹಣ ಗೋಚರ
- ಬೆಳಗಾವಿ:ಕುಂದಾ ನಗರಿಯಲ್ಲಿ ರಾಹುಗ್ರಸ್ತ ಸೂರ್ಯಗ್ರಹಣ ಗೋಚರ
- ಗ್ರಹಣ ವೀಕ್ಷಣೆ ಮಾಡಿದ ಜನರು
- ನಗರದ ಎಸ್.ಜಿ.ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಸೂರ್ಯಗ್ರಹಣ ವೀಕ್ಷಣೆಗೆ ಅವಕಾಶ
- ಶಿವಬಸವನಗರದ ನಾಗಲೋಟಿಮಠ ವಿಜ್ಞಾನ ಕೇಂದ್ರದ ಖಗೋಳವಿಜ್ಞಾನ ಕೇಂದ್ರ ಮುಖ್ಯಸ್ಥ ರಾಜಶೇಖ ಪಾಟೀಲ ನೇತೃತ್ವದಲ್ಲಿ ಆಯೋಜನೆ
- ಸೋಲಾರ್ ಗ್ಲಾಸ್, ಟೆಲಿಸ್ಕೋಪ್ ಹಾಕಿಕೊಂಡು ಗ್ರಹಣ ವೀಕ್ಷಣೆ ಮಾಡುತ್ತಿರುವ ಜನರು
11:01 June 21
ಬೆಂಗಳೂರಿನಲ್ಲಿ ಗೋಚರಿಸಿದ ಸೂರ್ಯಗ್ರಹಣ
- ಬೆಂಗಳೂರಿನಲ್ಲಿ ಗೋಚರಿಸಿದ ಸೂರ್ಯಗ್ರಹಣ
- ವಿಶೇಷ ಗಾಗಲ್ಸ್ ಮೂಲಕ ಗ್ರಹಣ ವೀಕ್ಷಿಸಿದ ಜನ
- ಕತ್ತಲೆ ಆಗಸದಲ್ಲಿ ಭಾನು ಗೋಚರ
10:58 June 21
ಗುಜರಾತ್ನಲ್ಲಿ ಕಿತ್ತಳೆ ಬಣ್ಣದ ಸೂರ್ಯ
- ಗುಜರಾತ್ನ ಗಾಂಧಿನಗರದಲ್ಲಿ ಕಿತ್ತಳೆ ಬಣ್ಣದ ಸೂರ್ಯ
- ಇಂದು ಮಧ್ಯಾಹ್ನ 1.32ರ ವರೆಗೆ ರಾಜ್ಯದಲ್ಲಿ ಗ್ರಹಣವಿರಲಿದೆ
- ಬೆಳಗ್ಗೆ 11.42ಕ್ಕೆ ಸಂಪೂರ್ಣ ಸೂರ್ಯಗ್ರಹಣ ಗೋಚರವಾಗಲಿದೆ
10:53 June 21
ಇಂದು ಭಕ್ತರಿಗಿಲ್ಲ ಹಂಪಿ ವಿರೂಪಾಕ್ಷನ ದರ್ಶನ
- ವರ್ಷಾರಂಭದಲ್ಲಿ ಮೊದಲನೇ ಸೂರ್ಯಗ್ರಹಣ ಹಿನ್ನಲೆ
- ಬಳ್ಳಾರಿಯ ಪ್ರಸಿದ್ಧ ಹಂಪಿ ವಿರೂಪಾಕ್ಷೇಶ್ವರನ ದೇವಾಲಯ ಬಂದ್
- ಬಂದ್ ಮಾಡುವಂತೆ ಹಿಂದೂ ಧಾರ್ಮಿಕ ದತ್ತಿ ಇಲಾಖೆಯಿಂದ ಆದೇಶ
10:50 June 21
ಸೂರ್ಯಗ್ರಹಣ ಎಫೆಕ್ಟ್ : ಬಾಗಿಲು ಮುಚ್ಚಿದ ದೇವಾಲಯಗಳು
- ಸೂರ್ಯಗ್ರಹಣ ಆರಂಭದ ಹಿನ್ನೆಲೆ
- ಬಾಗಿಲು ಮುಚ್ಚಿದ ದೇವಾಲಯಗಳು
- ಮೈಸೂರಿನ ಚಾಮುಂಡೇಶ್ವರಿ, ನಂಜುಂಡೇಶ್ವರ, ಚುಂಚನಕಟ್ಟೆ, ತಲಕಾಡು ಸೋಮನಾಥೇಶ್ವರ ದೇವಾಲಯಗಳು ಬಂದ್
- ಕಲಬುರಗಿ: ಶರಣಬಸವೇಶ್ವರ ದೇವಸ್ಥಾನದ ಬಾಗಿಲಿಗೆ ಬೀಗ
- ದೇವಸ್ಥಾನದ ಹೊರಗಡೆಯಿಂದಲೇ ದರ್ಶನ ಪಡೆದು ತೆರಳಿದ ಭಕ್ತರು
- ಬೀದರ್: ನರಸಿಂಹ ಸ್ವಾಮಿ ದೇವಾಲಯದ ಪ್ರವೇಶಕ್ಕೆ ನಿಷೇಧ
- ಭಕ್ತರು ಸಹಕರಿಸುವಂತೆ ಆಡಳಿತ ಮಂಡಳಿ ಮನವಿ
10:45 June 21
ಹಳದಿ ಮಿಶ್ರಿತ ಹಸಿರು ಬಣ್ಣದಲ್ಲಿ ಮೂಡಿಬಂದ ರವಿ
- ಮಹಾರಾಷ್ಟ್ರದಲ್ಲಿ ಗ್ರಹಣ ಆರಂಭ
- ಮುಂಬೈನಲ್ಲಿ ಹಳದಿ ಮಿಶ್ರಿತ ಹಸಿರು ಬಣ್ಣದಲ್ಲಿ ಮೂಡಿಬಂದ ಸೂರ್ಯ
10:38 June 21
ದೆಹಲಿಯಲ್ಲಿ ಸೂರ್ಯ ಕಂಡಿದ್ದು ಹೀಗೆ
- ರಾಷ್ಟ್ರ ರಾಜಧಾನಿಯಲ್ಲಿ ಸೂರ್ಯಗ್ರಹಣ ಗೋಚರ
- ದೆಹಲಿಯಲ್ಲಿ ಮಧ್ಯಾಹ್ನ 12.10ಕ್ಕೆ ಸಂಪೂರ್ಣ ಗ್ರಹಣ ಸಂಭವಿಸಲಿದೆ
10:37 June 21
ಗ್ರಹಣಕ್ಕೂ ಮುನ್ನ ಬೆಂಗಳೂರಿನ ದೇಗುಲಗಳಲ್ಲಿ ಹೋಮ- ಹವನ
- ಇಂದು ವಿಶೇಷ ಕಂಕಣ ಸೂರ್ಯಗ್ರಹ
- ಗ್ರಹಣ ಆರಂಭಕ್ಕೂ ಮುನ್ನ ಬೆಂಗಳೂರಿನ ದೇಗುಲಗಳಲ್ಲಿ ಹೋಮ- ಹವನ
- ಕೇತು, ಸೂರ್ಯನ ಶಾಂತಿಗಾಗಿ ನವಗ್ರಹ ಹೋಮ
- ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಈಶ್ವರನಿಗೆ ವಿಶೇಷ ಅಭಿಷೇಕ
- ನವಗ್ರಹ, ಪರಿವಾರ ದೇವತೆಗಳಿಗೂ ಗ್ರಹಣ ಪೂರ್ವ ಜಲಾಭಿಷೇಕ
- ಕೆಲವೇ ಕ್ಷಣಗಳಲ್ಲಿ ಹೋಮಹವನ ಮುಗಿಯಲಿದೆ
- ದೇವಸ್ಥಾನ ಬಾಗಿಲು ಮುಚ್ಚಲಾಗುತ್ತದೆ
- ಗ್ರಹಣ ಕಳೆದ ಬಳಿಕ ದೇವಸ್ಥಾನದ ಶುದ್ಧೀಕರಣ
- ಮಧ್ಯಾಹ್ನ 3 ಗಂಟೆಯ ನಂತರ ಭಕ್ತರ ದರ್ಶನಕ್ಕೆ ದೇವಾಲಯ ತೆರೆಯಲಿದೆ
10:32 June 21
ಕೊಡಗಿನ ದೇವಾಲಯಗಳು ಬಂದ್..!
- ಕಂಕಣ ಚೂಡಾಮಣಿ ಸೂರ್ಯಗ್ರಹಣ ಹಿನ್ನೆಲೆ
- ಕೊಡಗು ಜಿಲ್ಲೆಯ ಪ್ರಮುಖ ದೇಗುಲಗಳು ಬಂದ್
- ಭಾಗಮಂಡಲದ ಭಗಂಡೇಶ್ವರ, ತಲಕಾವೇರಿ ಹಾಗೂ ಮಡಿಕೇರಿಯ ಓಂಕಾರೇಶ್ವರ ದೇವಾಲಯವೂ ಬಂದ್
- ಲಾಕ್ಡೌನ್ ಬಳಿಕ ಜೂ.8 ರಿಂದ ಪುನರಾರಂಭಗೊಂಡಿದ್ದ ದೇವಸ್ಥಾನಗಳು
- ಇಂದು ಪೂರ್ತಿ ದಿನ ಬಂದ್ ಆಗಲಿವೆ
10:25 June 21
ಜಮ್ಮು-ಕಾಶ್ಮೀರದಲ್ಲಿ ಸೂರ್ಯಗ್ರಹಣ ಗೋಚರ
- ಜಮ್ಮು-ಕಾಶ್ಮೀರದಲ್ಲಿ ಬೆಳಗ್ಗೆ 9.15 ರಿಂದ ಆರಂಭಗೊಂಡ ಗ್ರಹಣ
- ಮಧ್ಯಾಹ್ನ 12.10ಕ್ಕೆ ಸಂಪೂರ್ಣ ಸೂರ್ಯಗ್ರಹಣ ಗೋಚರಿಸಲಿದೆ
- ಮಧ್ಯಾಹ್ನ 3.04ರ ವರೆಗೂ ವೀಕ್ಷಿಸಬಹುದಾಗಿದೆ
10:10 June 21
ಇಂದು ಕಂಕಣ ಸೂರ್ಯಗ್ರಹಣ
ನವದೆಹಲಿ:ಏಷ್ಯಾ, ಆಫ್ರಿಕಾ ಹಾಗೂ ಯುರೋಪ್ನ ಕೆಲವು ಭಾಗಗಳಿಗೆ ಇಂದು ಕಂಕಣ ಸೂರ್ಯಗ್ರಹಣ. ಭಾರತದ ಉತ್ತರ ಭಾಗಗಳಲ್ಲಿ ಇಂದು ಬೆಳಗ್ಗೆ 10:25ರಿಂದ ಸೂರ್ಯಗ್ರಹಣ ಗೋಚರಿಸಲಿದೆ. ಇಂದು ಸಂಭವಿಸಲಿರುವ ಸೂರ್ಯಗ್ರಹಣದಲ್ಲಿ ಸೂರ್ಯನು ಬೆಂಕಿಯ ಉಂಗುರದಂತೆ ಗೋಚರಿಸಲಿದ್ದಾನೆ. ರಾಜಸ್ಥಾನದ ಸೂರತ್ಗರ್ ಮತ್ತು ಅನುಪ್‌ಗರ್, ಹರಿಯಾಣದ ಸಿರ್ಸಾ, ರತಿಯಾ ಮತ್ತು ಕುರುಕ್ಷೇತ್ರ, ಉತ್ತರಾಖಂಡದ ಡೆಹ್ರಾಡೂನ್, ಚಂಬಾ, ಚಮೋಲಿ ಮತ್ತು ಜೋಶಿಮಠದಲ್ಲಿ ಕೇವಲ ಒಂದು ನಿಮಿಷದವರೆಗೆ ಸೂರ್ಯ 'ಬೆಂಕಿಯ ಉಂಗುರದಂತೆ' ಕಾಣಿಸಲಿದ್ದಾನೆ. ಬೆಳಿಗ್ಗೆ 10:25ಕ್ಕೆ ಆರಂಭಗೊಳ್ಳುವ ಗ್ರಹಣ ಮಧ್ಯಾಹ್ನ 1:54ಕ್ಕೆ ಕೊನೆಗೊಳ್ಳಲಿದೆ.