ಕರ್ನಾಟಕ

karnataka

ETV Bharat / bharat

ಮಾಟ - ಮಂತ್ರ ಶಂಕೆ: ಸಂಬಂಧಿಕರಿಂದಲೇ ಸಾಫ್ಟವೇರ್ ಉದ್ಯೋಗಿ ಸಜೀವ ದಹನ - ಸಾಫ್ಟವೇರ್ ಉದ್ಯೋಗಿ ಹತ್ಯೆ

ಮಾಟಮಂತ್ರದ ಆರೋಪದಡಿ ಸಾಫ್ಟವೇರ್ ಉದ್ಯೋಗಿಯನ್ನು ಸಂಬಂಧಿಗಳೇ ಸಜೀವ ದಹನ ಮಾಡಿರುವ ಘಟನೆ ನಡೆದಿದೆ. ಸೋದರ ಮಾವನ ಸಾವಿನಲ್ಲಿ ಈತನ ಕೈವಾಡವಿದೆ ಎಂದು ಶಂಕಿಸಿ ಈ ಕೃತ್ಯ ಎಸಗಲಾಗಿದೆ.

software-engineer-live-burning-with-black-magic-suspicion-at-jagtial-in-telangana
ಮಾಟ-ಮಂತ್ರ ಶಂಕೆ: ಸಂಬಂಧಿಕರಿಂದಲೇ ಸಾಫ್ಟವೇರ್ ಉದ್ಯೋಗಿಯ ಸಜೀವ ದಹನ

By

Published : Nov 24, 2020, 12:02 PM IST

ಜಗಿತ್ಯಾಲ (ತೆಲಂಗಾಣ):ಸಾಫ್ಟ್​ವೇರ್ ಉದ್ಯೋಗಿಯೊಬ್ಬನನ್ನು ಪೆಟ್ರೋಲ್ ಸುರಿದು ಸಜೀವ ದಹನ ಮಾಡಿರುವ ದಾರುಣ ಘಟನೆ ಜಗಿತ್ಯಾಲದಲ್ಲಿ ನಡೆದಿದೆ. ಉದ್ಯೋಗಿ ಪವನ್ ಕುಮಾರ್ ಎಂಬಾತನಿಗೆ ಕುಟುಂಬಸ್ಥರೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.

ಇಲ್ಲಿನ ಬಲ್ವಂತ್​​ಪುರದ ಶಿವನ ದೇವಾಲಯದಲ್ಲಿಯೇ ಈ ಕೃತ್ಯ ಎಸಗಲಾಗಿದೆ. ಪವನ್ ಅವರ ಕಿರಿಯ ಸೋದರ ಮಾವ ಇತ್ತೀಚಿಗೆ ಅನಾರೋಗ್ಯದಿಂದ ನಿಧನರಾಗಿದ್ದರು. ಈ ಹಿನ್ನೆಲೆ ಪವನ್ ತಮ್ಮ ಕುಟುಂಬದ ಸದಸ್ಯರನ್ನು ಭೇಟಿ ಮಾಡಲು ಆಗಮಿಸಿದ್ದ ವೇಳೆ ಈ ಕೃತ್ಯ ಎಸಗಿದ್ದಾರೆ.

ಮಾಟ-ಮಂತ್ರ ಶಂಕೆ: ಸಂಬಂಧಿಕರಿಂದಲೇ ಸಾಫ್ಟವೇರ್ ಉದ್ಯೋಗಿಯ ಸಜೀವ ದಹನ

ಕಳೆದ 12 ದಿನದ ಹಿಂದೆ ವಿಜಯ್ ಸಹೋದರ ಜಗನ್ ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟಿದ್ದರು. ಈ ಹಿನ್ನೆಲೆ ವಿಜಯ್ ಮನೆಗೆ ಪವನ್​ ಕುಮಾರ್ ಹಾಗೂ ಪತ್ನಿ ಕೃಷ್ಣವೇಣಿ ಸಂತಾಪ ಸೂಚಿಸಲು ಆಗಮಿಸಿದ್ದರು.

ಈ ವೇಳೆ ಜಗನ್ ಸಾವಿಗೆ ಪವನ್ ಮಾಟ ಮಂತ್ರ ಮಾಡಿಸಿದ್ದಾರೆ ಎಂದು ಆರೋಪಿಸಿ ದೇವಾಲಯದ ರೂಮಿನೊಳಗೆ ಬಂಧಿಸಿಟ್ಟಿದ್ದಾರೆ. ಬಳಿಕ ಆತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.

ಘಟನೆ ಸಂಬಂಧ ಪವನ್ ಕುಮಾರ್ ಪತ್ನಿ ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಕೃತ್ಯ ಎಸಗಿದ ಸಂಬಂಧಿಕರನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ.

ABOUT THE AUTHOR

...view details