ಅಸ್ಸೋಂ: ಇಲ್ಲಿನ ಕೋಕ್ರಾಜಾರ್ ಜಿಲ್ಲೆಯಲ್ಲಿ ಒಂದೇ ಕುಟುಂಬದ ಐವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರಲ್ಲಿ ಮೂವರು ಮಹಿಳೆಯರಿದ್ದಾರೆ.
ಒಂದೇ ಕುಟುಂಬದ ಐವರು ನೇಣಿಗೆ ಶರಣು: ಕಾರಣ ನಿಗೂಢ - ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಕುಟುಂಬ
ಕೋಕ್ರಾಜಾರ್ ಜಿಲ್ಲೆಯ ತುಳ್ಸಿಬಿಲ್ ಬಜಾರ್ನ ಗೊಸ್ಸೈಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುರ್ಘಟನೆ ಸಂಭವಿಸಿದೆ. ಐವರು ಕುಟುಂಬಸ್ಥರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಸುಸೈಡ್ಗೆ ನಿಖರ ಕಾರಣ ತಿಳಿದು ಬಂದಿಲ್ಲ.
![ಒಂದೇ ಕುಟುಂಬದ ಐವರು ನೇಣಿಗೆ ಶರಣು: ಕಾರಣ ನಿಗೂಢ socking-incident-five-members-of-a-family-commit-suicide-in-kokrajhar-assam](https://etvbharatimages.akamaized.net/etvbharat/prod-images/768-512-9398983-thumbnail-3x2-asm.jpg)
ಕೋಕ್ರಾಜಾರ್ ಜಿಲ್ಲೆಯ ತುಳ್ಸಿಬಿಲ್ ಬಜಾರ್ನ ಗೊಸ್ಸೈಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುರ್ಘಟನೆ ಸಂಭವಿಸಿದೆ. ಐವರು ಕುಟುಂಬಸ್ಥರು ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರನ್ನು ನಿರ್ಮಲ್ ಪೌಲ್, ಮೊಲ್ಲಿಕ ಪೌಲ್, ನಿಹಾ ಪೌಲ್, ದೀಪಾ ಪೌಲ್ ಎಂದು ಗುರುತಿಸಲಾಗಿದೆ.
ಪೌಲ್ ಕುಟುಂಬ ತುಳ್ಸಿಬಿಲ್ ಬಜಾರ್ನಲ್ಲಿ ಹಲವು ವರ್ಷಗಳಿಂದ ನೆಲೆಸಿದ್ದರು. ಆದರೆ, ಮಂಗಳವಾರ ಬೆಳಗ್ಗೆ ಕುಟುಂಬದ ಯಾವೊಬ್ಬ ಸದಸ್ಯರು ಮನೆಯಿಂದ ಹೊರ ಬಂದಿರಲಿಲ್ಲ, ಬಳಿಕ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಅಲ್ಲಿನ ಸ್ಥಳೀಯರು ಗಮನಿಸಿದ್ದಾರೆ. ಇನ್ನು ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.