ಜಮ್ಮು: ಅಮರನಾಥ ಯಾತ್ರೆ ಮಾರ್ಗದಲ್ಲಿ ಸ್ನಿಪರ್ ಗನ್ ಪತ್ತೆಯಾದ ಬಳಿಕ, ಉಗ್ರದಾಳಿ ಸಂಭವಿಸುವ ತೀವ್ರ ಆತಂಕ ಎದುರಾಗಿದೆ. ಇದರಿಂದ ಯಾತ್ರಿಕರು ಕೂಡಲೆ ತಾವಿರುವ ಪ್ರದೇಶಗಳಿಂದ ಹಿಂದಿರುಗುವಂತೆ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಸೂಚನೆ ನೀಡಿದೆ.
ಅಮರನಾಥ ಯಾತ್ರೆ ಮಾರ್ಗದಲ್ಲಿ ಸ್ನಿಪರ್ ಗನ್ ಪತ್ತೆ: ಯಾತ್ರಿಕರು ಹಿಂದಿರುಗುವಂತೆ ಸೂಚನೆ - ಗುಪ್ತಚರದಳ
ಸ್ನಿಪರ್ ಗನ್ ಪತ್ತೆಯಾದ ಬಳಿಕ, ಉಗ್ರದಾಳಿ ಸಂಭವಿಸುವ ತೀವ್ರ ಆತಂಕದಿಂದ ಅಮರನಾಥ ಯಾತ್ರೆಯಲ್ಲಿರುವ ಯಾತ್ರಿಕರು ಕೂಡಲೇ ತಾವಿರುವ ಪ್ರದೇಶಗಳಿಂದ ಹಿಂದಿರುಗುವಂತೆ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಸೂಚನೆ ನೀಡಿದೆ.
Amarnath Yatra
ಅಮರನಾಥಯಾತ್ರೆ ವೇಳೆ ಉಗ್ರದಾಳಿ ನಡೆಯುವ ಸಾಧ್ಯತೆ ಇರುವುದಾಗಿ ಗುಪ್ತಚರದಳ ಮಾಹಿತಿ ನೀಡಿರುವ ಹಿನ್ನೆಲೆ, ರಾಜ್ಯದ ಗೃಹ ಇಲಾಖೆ ಈ ಆದೇಶ ನೀಡಿದೆ. ಯಾತ್ರಿಕರ ಭದ್ರತೆ ದೃಷ್ಟಿಯಿಂದ ಈ ಸೂಚನೆ ಹೊರಬಿದ್ದಿದೆ. ಆಗಸ್ಟ್ 4ರವರೆಗೂ ಯಾತ್ರೆ ರದ್ದು ಮಾಡಲಾಗಿದೆ.
ಯಾತ್ರೆ ವೇಳೆ ಭಯೋತ್ಪಾದನಾ ಕೃತ್ಯಗಳು ನಡೆಯುವ ಆತಂಕ ನಿರ್ಮಾಣವಾಗಿತ್ತು. ಇದಕ್ಕೆ ಪೂರಕವಾಗಿ ಗುಪ್ತಚರ ದಳವೂ ಮಾಹಿತಿ ನೀಡಿದ್ದರಿಂದ ಕಣಿವೆ ರಾಜ್ಯದಲ್ಲಿ ತೀವ್ರ ಆತಂಕ ಎದುರಾಗಿದೆ.