ನವದೆಹಲಿ: ರಾಷ್ಟ್ರದ ರಾಜಧಾನಿಯಲ್ಲಿ ಕೋಮು ಹಿಂಸಾಚಾರದ ಹಿನ್ನೆಲೆಯಲ್ಲಿ, 1985ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಎಸ್.ಎನ್ ಶ್ರೀವಾಸ್ತವ ಅವರನ್ನು ನಗರದ ಪರಿಸ್ಥಿತಿ ನಿಯಂತ್ರಿಸಲು ದೆಹಲಿ ಪೊಲೀಸ್ ವಿಶೇಷ ಆಯುಕ್ತರಾಗಿ (ಕಾನೂನು ಮತ್ತು ಸುವ್ಯವಸ್ಥೆ) ನೇಮಕ ಮಾಡಲಾಗಿದೆ.
1985ರ ಬ್ಯಾಚ್‌ನ ಎಜಿಎಂಯುಟಿ ಕೇಡರ್ ಅಧಿಕಾರಿಯನ್ನು ತಕ್ಷಣದಲ್ಲೆ ಹೊಸ ಹುದ್ದೆಗೆ ನೇಮಕ ಮಾಡಿ ದೆಹಲಿ ಸರ್ಕಾರದ ಗೃಹ ಇಲಾಖೆ ಆದೇಶ ಹೊರಡಿಸಿದೆ.
ಗೃಹ ಸಚಿವಾಲಯ ಆದೇಶಿಸಿದ ನಂತರ ಶ್ರೀವಾಸ್ತವ ವಿಶೇಷ ಮಹಾನಿರ್ದೇಶಕರಾಗಿ (ತರಬೇತಿ) ಸೇವೆ ಸಲ್ಲಿಸುತ್ತಿದ್ದ ಕೇಂದ್ರ ಮೀಸಲು ಪೊಲೀಸ್ ಪಡೆಯ ಅರೆಸೈನಿಕ ಪಡೆಯಿಂದ ಮುಕ್ತಗೊಳಿಸುವ ಆದೇಶವನ್ನೂ ಹೊರಡಿಸಿದೆ.
ಅಧಿಕಾರಿಗಳ ಪ್ರಕಾರ, ಈ ಹಿಂದೆ ದೆಹಲಿ ಪೊಲೀಸ್ ಇಲಾಖೆಯ ವಿವಿಧೆಡೆ ಸೇವೆ ಸಲ್ಲಿಸಿದ ಶ್ರೀವಾಸ್ತವ ಅವರು ಇತರ ಪೊಲೀಸ್ ಅಧಿಕಾರಿಗಳೊಂದಿಗೆ ಸಂವಹನ ನಡೆಸಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಶಾಂತಿ ಸ್ಥಾಪಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸ್ಕೆಚ್ ರೆಡಿ ಮಾಡಿದ್ದಾರೆ.