ಕರ್ನಾಟಕ

karnataka

ETV Bharat / bharat

ರೋಗಿಯನ್ನು ಆಸ್ಪತ್ರೆಗೆ ಸಾಗಿಸಲು ನೆರವಾದ ಕೇಂದ್ರ ಸಚಿವೆ; ಬೆಂಗಾವಲು ಆ್ಯಂಬುಲೆನ್ಸ್ ನೀಡಿ ಮಾನವೀಯತೆ - kannadanews

ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಮಹಿಳೆಯೊಬ್ಬರನ್ನು ಆಸ್ಪತ್ರೆಗೆ ಸಾಗಿಸಲು ತಮ್ಮ ಬೆಂಗಾವಲು ಆ್ಯಂಬುಲೆನ್ಸ್ ನೀಡಿರುವ ಘಟನೆ ಅಮೇಠಿಯಲ್ಲಿ ನಡೆದಿದೆ.

ರೋಗಿಯನ್ನು ಆಸ್ಪತ್ರೆಗೆ ಸಾಗಿಸಲು ಬೆಂಗಾವಲು ಆ್ಯಂಬುಲೆನ್ಸ್ ನೀಡಿದ ಸಚಿವೆ

By

Published : Jun 22, 2019, 7:50 PM IST

ಉತ್ತರ ಪ್ರದೇಶ: ಬಿಜೆಪಿ ಸಂಸದೆ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅನಾರೋಗ್ಯ ಪೀಡಿತ ಮಹಿಳೆಯೊಬ್ಬರನ್ನು ಆಸ್ಪತ್ರೆಗೆ ಸಾಗಿಸಲು ತಮ್ಮ ಬೆಂಗಾವಲು ಆಂಬ್ಯುಲೆನ್ಸನ್ನು ನೀಡಿರುವ ಅಪರೂಪದ ಘಟನೆ ಉತ್ತರ ಪ್ರದೇಶದ ಅಮೇಠಿಯಲ್ಲಿ ನಡೆದಿದೆ.

ರೋಗಿಯನ್ನು ಆಸ್ಪತ್ರೆಗೆ ಸಾಗಿಸಲು ಬೆಂಗಾವಲು ಆ್ಯಂಬುಲೆನ್ಸ್ ನೀಡಿದ ಸಚಿವೆ

ಈ ಸಂಬಂಧ ವಿಡಿಯೋ ಹರಿದಾಡುತ್ತಿದ್ದು, ವಿಡಿಯೋದಲ್ಲಿ ಮಹಿಳೆಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲು ಸ್ಮೃತಿ ಇರಾನಿ ತನ್ನ ಅಧಿಕಾರಿಗಳಿಗೆ ನಿರ್ದೇಶನ ನೀಡುತ್ತಿರುವುದು ಕಂಡುಬರುತ್ತದೆ. ಜೊತೆಗೆ ಮಹಿಳೆಯ ಸಂಬಂಧಿಕರನ್ನೂ ಸಹ ಬೆಂಗಾವಲು ಆಂಬ್ಯುಲೆನ್ಸ್ ನಲ್ಲಿಯೇ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.

ಸ್ಮೃತಿ ಇರಾನಿಯವರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್​ ಲಭ್ಯವಿರದ ಪರಿಸ್ಥಿತಿಯಲ್ಲಿ ಸಚಿವೆ ಇರಾನಿ ರೋಗಿಯ ಸಹಾಯಕ್ಕೆ ಬರುವ ಮೂಲಕ ಮಾನವೀಯತೆ ಮೆರೆದಿದ್ದಾರೆ ಎಂದು ಕಾರ್ಯವನ್ನು ಶ್ಲಾಘಿಸಿದ್ದಾರೆ.

ABOUT THE AUTHOR

...view details