ಕರ್ನಾಟಕ

karnataka

ETV Bharat / bharat

ಕೇಂದ್ರದಿಂದ 14 ಕೋಟಿ ಜನರಿಗೆ ಉಚಿತ ಎಲ್ಪಿಜಿ.. ಬೆಲೆ ಹೆಚ್ಚಳ ಸಮರ್ಥಿಸಿಕೊಂಡ ಸ್ಮೃತಿ ಇರಾನಿ - ಜೈಪುರ

ಕೋವಿಡ್ -19 ಸಾಂಕ್ರಾಮಿಕ ಕಾಲದಲ್ಲಿ ನಮ್ಮ ಸರ್ಕಾರ 'ಪ್ರಧಾನ್ ಮಂತ್ರಿ ಉಜ್ವಲ ಯೋಜನೆ' ಅಡಿಯಲ್ಲಿ ದೇಶದ 14 ಕೋಟಿ ಬಡ ಜನರಿಗೆ ಗ್ಯಾಸ್ ಸಿಲಿಂಡರ್​​ಗಳನ್ನು ಒದಗಿಸಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದರು.

Smriti Irani
ಕೇಂದ್ರ ಸಚಿವೆ ಸ್ಮೃತಿ ಇರಾನಿ

By

Published : Feb 7, 2021, 7:20 PM IST

ಜೈಪುರ: ದೇಶದಲ್ಲಿ ಹೆಚ್ಚುತ್ತಿರುವ ಸಿಲಿಂಡರ್‌ಗಳ ಬೆಲೆಯನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಮರ್ಥಿಸಿಕೊಂಡಿದ್ದಾರೆ.

ಕೇಂದ್ರ ಸಚಿವೆ ಸ್ಮೃತಿ ಇರಾನಿ..

ಪ್ರಧಾನಿ ತಮ್ಮ ದೂರದೃಷ್ಟಿ ಯೋಜನೆಯಾದ 'ಪ್ರಧಾನ್ ಮಂತ್ರಿ ಉಜ್ವಲ ಯೋಜನೆ' ಮೂಲಕ ಕೊರೊನಾ ಸಾಂಕ್ರಾಮಿಕ ರೋಗದ ಕಠಿಣ ಸಮಯದಲ್ಲಿಯೂ ಗ್ರಾಮೀಣ ಪ್ರದೇಶದ ಬಡ ಜನರಿಗೆ ಉಚಿತ ಸಿಲಿಂಡರ್‌ಗಳನ್ನು ಒದಗಿಸಿದ್ದಾರೆ ಎಂದರು.

ಜೈಪುರದಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶದ ಜನರ ಸೇವೆ ಸಲ್ಲಿಸಲು ಅವಕಾಶ ನೀಡಿದಾಗ, ಒಂದು ಕೋಟಿಗೂ ಹೆಚ್ಚು ಜನರು ಸಿಲಿಂಡರ್ ಮೇಲಿನ ಸಬ್ಸಿಡಿಯನ್ನು ತ್ಯಜಿಸಿದರು.

ಕೋವಿಡ್ -19 ಸಾಂಕ್ರಾಮಿಕ ಕಾಲದಲ್ಲಿ ನಮ್ಮ ಸರ್ಕಾರವು ಈ ಯೋಜನೆಯಡಿ ದೇಶದ 14 ಕೋಟಿ ಬಡ ಜನರಿಗೆ ಗ್ಯಾಸ್ ಸಿಲಿಂಡರ್​​ಗಳನ್ನು ಒದಗಿಸಿತು ಎಂದು ಸ್ಮೃತಿ ಇರಾನಿ ಹೇಳಿದರು.

ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಕಡಿಮೆ ಮಾಡಲು ಯತ್ನಿಸುತ್ತಿದೆ. ಅದರಂತೆ ರಾಜಸ್ಥಾನದ ಗೆಹ್ಲೋಟ್ ಸರ್ಕಾರವೂ ಬೆಲೆಗಳನ್ನು ಇಳಿಸಲು ಬಯಸಿದರೆ ಇವುಗಳ ಮೇಲಿನ ವ್ಯಾಟ್ ಕಡಿಮೆ ಮಾಡಲಿ. ಆ ಮೂಲಕ ಜನರಿಗೆ ಸಹಾಯ ಮಾಡಲಿ ಎಂದು ಇರಾನಿ ತಿಳಿಸಿದರು.

ABOUT THE AUTHOR

...view details