ಕರ್ನಾಟಕ

karnataka

ETV Bharat / bharat

ಸ್ಲೊವೇನಿಯಾ ಗಣರಾಜ್ಯ ಕೊರೊನಾ ಮುಕ್ತ..! - ಸ್ಲೊವೇನಿಯಾ ಗಣರಾಜ್ಯ ಕೊರೊನಾ ಮುಕ್ತ.

ಯುರೋಪಿಯನ್ ಒಕ್ಕೂಟ ಕೊವಿಡ್ ಎದುರು ಸೆಣಸುತ್ತಿರುವ ಸಂದರ್ಭದಲ್ಲಿಯೇ ಸ್ಲೊವೇನಿಯಾ ಗಣರಾಜ್ಯವು ತನ್ನನ್ನು ಕೋವಿಡ್ ಮುಕ್ತ ಎಂದು ಘೊಷಿಸಿಕೊಂಡಿದೆ. ಈ ಕುರಿತು ಅಲ್ಲಿನ ಸರಕಾರ ಸುಗ್ರೀವಾಜ್ಞೆ ಯನ್ನು ಹೊರಡಿಸಿದ್ದು, ಮೇ 15 ರಿಂದ ಅನ್ವಯವಾಗುವಂತೆ ಸ್ಲೊವೇನಿಯಾ ಕೋವಿಡ್ ಮುಕ್ತ ಎಂದು ಘೋಷಿಸಲಾಗಿದೆ. ದೇಶದಲ್ಲಿ ಕೊವಿಡ್ ಪ್ರಕರಣಗಳ ಪ್ರಮಾಣ ದಾಖಲೆಯ ಇಳಿಕೆ ಕಂಡಿದೆ.

Slovenia becomes first country to declare end of COVID-19 outbreak
ಸ್ಲೊವೇನಿಯಾ ಗಣರಾಜ್ಯ ಕೊರೊನಾ ಮುಕ್ತ

By

Published : May 18, 2020, 8:08 PM IST

ಹೈದರಾಬಾದ್: ಕೊರೊನಾ ವೈರಸ್ ಸಾಂಕ್ರಾಮಿಕ ಸೋಂಕಿಗೆ ಯುರೋಪಿಯನ್ ರಾಷ್ಟ್ರ ಸ್ಲೊವೇನಿಯಾ ಮುಕ್ತ ಮೊದಲ ದೇಶವಾಗಿದೆ. ಕೋವಿಡ್ -19 ಸಾಂಕ್ರಾಮಿಕ ಹರಡುವಿಕೆ ನಿಯಂತ್ರಣದಲ್ಲಿದೆ ಮತ್ತು ಆರೋಗ್ಯ ಉಪಕ್ರಮಗಳ ಅಗತ್ಯವಿಲ್ಲ ಎಂದು ಸ್ಲೊವೇನಿಯಾ ಸರಕಾರ ಶುಕ್ರವಾರ ತಿಳಿಸಿದೆ.

ಕೊವಿಡ್ -19 ಸಾಂಕ್ರಾಮಿಕ ರೋಗ ಹರಡುವಿಕೆ ಅಪಾಯ ಇನ್ನೂ ಇರುವುದರಿಂದ, ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಕ್ರಮಗಳನ್ನು ಅಡಿಯಲ್ಲಿ ಬರುವ ನಿರ್ಧಾರಕ್ಕೆ ಅನುಸಾರವಾಗಿ ಅಳವಡಿಸಲಾಗಿರುವ ಸಾಮಾನ್ಯ ಮತ್ತು ನಿರ್ದಿಷ್ಟ ಕ್ರಮಗಳು ತಜ್ಞರ ಅಭಿಪ್ರಾಯದ ಆಧಾರದ ಮೇಲೆ 31 ಮೇ 2020 ರವರೆಗೆ ಅನ್ವಯವಾಗುತ್ತಲೇ ಇರುತ್ತವೆ ಎಂದು ಸುಗ್ರೀವಾಜ್ಞೆಯಲ್ಲಿ ತಿಳಿಸಲಾಗಿದೆ. ಪ್ರಸ್ತುತ ಜಾರಿಯಲ್ಲಿರುವ ಸಾಂಕ್ರಾಮಿಕ ರೋಗ ಪ್ರತಿಬಂಧಕ ನಿಯಮಗಳ ಪ್ರಕಾರ ಕೋವಿಡ್ -19 ಹರಡುವಿಕೆಯ ನಿಯಂತ್ರಿಸುವ ತುರ್ತು ಕ್ರಮಗಳಾಗಿವೆ ಹೊರತು ಅವುಗಳನ್ನು ಸಂಪೂರ್ಣ ಸಡಿಲಗೊಳಿಸಲು ಸಾಧ್ಯವಿಲ್ಲ ಸ್ಲೊವೇನಿಯಾದಲ್ಲಿ ಸಾರ್ಸ್-ಕೋವಿಡ್ -2 ಮೊದಲ ಸೋಂಕು ಮಾರ್ಚ್ 4, 2020 ರಂದು ದಾಖಲಾಗಿದೆ. ಮೇ 14 ರವರ ಹೊತ್ತಿಗೆ ಕೋವಿಡ್ ರೋಗಿಗಳ ಸಂಖೈ 1465 ರಷ್ಟು ದಾಖಲಾಗಿವೆ.

ಸಂಚಿತ 14 ದಿನಗಳಲ್ಲಿ 35 ಪ್ರಕರಣಗಳು ಘಟಿಸಿವೆ ಮತ್ತು ಇದರ ದ್ವಿಗುಣಗೊಳ್ಳುವಿಕೆಯ ಸಂಖ್ಯೆ ಪ್ರಸ್ತುತ ಒಂದಕ್ಕಿಂತ ಕಡಿಮೆಯಾಗಿದೆ. ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ಸಂಸ್ಥೆ ನಡೆಸಿದ ಮೌಲ್ಯಮಾಪನದಲ್ಲಿ, ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸುವ ಜತೆಗೆ ಕೋವಿಡ್ ಪರೀಕ್ಷೆ ನಡೆಸುವುದು, ರೋಗಿಗಳನ್ನು ಪ್ರತ್ಯೇಕಿಸುವುದು, ರೋಗಿಗಳ ಸಂಪರ್ಕ ಜಾಲ ಶೋಧಿಸುವುದು. ಹೆಚ್ಚಿನ ಅಪಾಯ ಹೊಂದಿರುವ ರೋಗಿಗಳ ನಿಕಟ ಸಂಪರ್ಕ ಹೊಂದಿರುವವರನ್ನು ಕಡ್ಡಾಯ ಕ್ವಾರಂಟೈನ್ ಗೆ ಒಳಪಡಿಸುವುದು ,ಕೈ ಮತ್ತು ಕೆಮ್ಮು ಬರದಂತೆ ಎಚ್ಚರಿಕೆ ವಹಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಅಥವಾ ಬಾಯಿ ಮತ್ತು ಮೂಗಗಳನ್ನು ಮುಚ್ಚಿಕೊಳುವ ಕ್ರಮಗಳು ಜಾರಿಯಲ್ಲಿವೆ.

ಇದಲ್ಲದೇ, ಮಕ್ಕಳು ಮತ್ತು ವಿದ್ಯಾರ್ಥಿಗಳು ಮೇ 18 ರವರೆಗೆ ಶಾಲೆಗಳಿಗೆ ಮತ್ತು ನರ್ಸರಿಗಳಿಗೆ ಹಿಂತಿರುಗುಂತಿಲ್ಲ. ನಿನ್ನೆ, ಸ್ಲೊವೇನಿಯಾ ಗಣರಾಜ್ಯದ ಸರ್ಕಾರವು ಯುರೋಪಿಯನ್ ಯುನಿಯನ್ ನಾಗರಿಕರಿಗೆ ಏಳು ದಿನಗಳ ಕಾಲ ವಿಧಿಸಿದ್ದ ಕಡ್ಡಾಯ ಕ್ವಾರಂಟೈನ್ ಅನ್ನು ತೆಗೆದುಹಾಕಿದೆ. ಜತೆಗೆ ಯುರೋಪಿಯನ್ ಒಕ್ಕೂಟದಲ್ಲಿ ನೆಲೆಸಿರುವ ಶಾಶ್ವತ ಅಥವಾ ತಾತ್ಕಾಲಿಕ ನಿವಾಸ ಹೊಂದಿರದ ಎಲ್ಲ ಮೂರನೇ ದರ್ಜೆಯ ನಾಗರಿಕರಿಗೆ 14 ದಿನಗಳ ಕಡ್ಡಾಯ ಕ್ವಾರಂಟೈನ್ ಗೊಳಿಸಲಾಗಿದೆ. ಯುರೋಪಿಯನ್ ಯುನಿಯನ್ ನಲ್ಲಿ ಶಾಶ್ವತ ಅಥವಾ ತಾತ್ಕಾಲಿಕ ನಿವಾಸವನ್ನು ಹೊಂದಿರುವ ನಾಗರಿಕರು ಮತ್ತು 14 ದಿನಗಳಿಗಿಂತ ಹೆಚ್ಚು ಕಾಲ ಯುರೋಪಿಯನ್ ಒಕ್ಕೂಟವನ್ನು ತೊರೆದು ಹಿಂತಿರುಗಿರುವ ನಾಗರಿಕರಿಗೆ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ.

ABOUT THE AUTHOR

...view details