ಬಸ್ತರ್(ಛತ್ತೀಸ್‌ಗಢ):ನಕ್ಸಲಿಸಂ, ಬುಡಕಟ್ಟು ಹಾಗೂ ನೈಸರ್ಗಿಕ ಸೌಂದರ್ಯ ಈ ಮೂರು ಒಂದೆಡೆ ಕಂಡು ಬರುವುದು ಛತ್ತೀಸ್‌ಗಢದ ಬಸ್ತರ್ನಲ್ಲಿ. ಬಸ್ತರ್ ಈ ರಾಜ್ಯದ ದಕ್ಷಿಣ ಭಾಗದಲ್ಲಿದ್ದು, ಜನಸಂಖ್ಯೆಯ ಶೇ.70 ರಷ್ಟು ಜನರು ಬುಡಕಟ್ಟು ಸಮುದಾಯದವರಾಗಿದ್ದಾರೆ.
ಈ ಬುಡಕಟ್ಟು ಸಮುದಾಯದ ಜನರು ಹೆಚ್ಚಾಗಿ ಕಾಡುಗಳಲ್ಲಿ ವಾಸಿಸುತ್ತಾರೆ. ಅನನ್ಯ ಗುರುತು, ವಿಭಿನ್ನ ಸಂಸ್ಕೃತಿ, ಕಲೆ ಮತ್ತು ವಿಶೇಷ ಉತ್ಸವಗಳಿಗೆ ಇವರು ಹೆಸರುವಾಸಿ. ಆದರೆ ಇಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲ. ಹೀಗಿರುವಾಗ ಆನ್‌ಲೈನ್ ಶಿಕ್ಷಣದ ಯಶಸ್ಸು ಅಲ್ಲಿನ ಮಕ್ಕಳಿಗೆ ಕನಸಾಗಿಯೇ ಉಳಿಯುತ್ತಿದೆ.
ಇಲ್ಲಿ ಯಾವುದೇ ಮೊಬೈಲ್ ನೆಟ್‌ವರ್ಕ್ ಸಹ ಇಲ್ಲ. ಜನರ ಹತ್ತಿರ ಸ್ಮಾರ್ಟ್‌ಫೋನ್ ಹಾಗೂ ಮೊಬೈಲ್ ಫೋನ್ಗೆ ರೀಚಾರ್ಜ್ ಮಾಡಲೂ ಸಹ ಈ ಜನರಲ್ಲಿ ಹಣವಿಲ್ಲ. ಇಲ್ಲಿಯ ಪರಿಸ್ಥಿತಿ ಹೇಗಿದೆಯೆಂದರೆ, ಜುಲೈ 3 ರಂದು ಇಡೀ ವಿಭಾಗದಿಂದ ಕೇವಲ 17 ವಿದ್ಯಾರ್ಥಿಗಳು ಮಾತ್ರ ಆನ್‌ಲೈನ್ ಶಿಕ್ಷಣದ ತರಗತಿಗೆ ಹಾಜರಾಗಿದ್ದರು. ಉಳಿದ ದಿನಗಳ ಅಂಕಿ- ಅಂಶಗಳ ಪ್ರಕಾರ, 30 ವಿದ್ಯಾರ್ಥಿಗಳನ್ನೂ ದಾಟಿಲ್ಲ. ಅಷ್ಟು ಮಾತ್ರವಲ್ಲ, ಆನ್‌ಲೈನ್ ಶಿಕ್ಷಣಕ್ಕಾಗಿ ನೋಂದಣಿಯ ಶೇಕಡಾವಾರು ಪ್ರಮಾಣವನ್ನು ಸಾಧಿಸಲಾಗಿಲ್ಲ.
ಶಿಕ್ಷಕರು ಸ್ವತಃ ಸರಿಯಾದ ತರಬೇತಿ ಪಡೆದಿಲ್ಲ. ಆದ್ದರಿಂದ ಮಕ್ಕಳಿಗೆ ಸರಿಯಾಗಿ ಕಲಿಸಲು ಸಾಧ್ಯವಾಗುತ್ತಿಲ್ಲ ಎಂದು ಪೋಷಕರು ಹೇಳುತ್ತಾರೆ. ಈ ಪರಿಸ್ಥಿತಿಯಲ್ಲಿ, ಆನ್‌ಲೈನ್ ಶಿಕ್ಷಣವು ಕೇವಲ ಸಾಂಕೇತಿಕ ಕ್ರಿಯೆಯಾಗಿದೆ. ಅವರು ಈಗ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅಧಿಕಾರಿಗಳ ಪ್ರಕಾರ, ಬಸ್ತರ್ ಪ್ರದೇಶ ಸಾಕಷ್ಟು ಹಿಂದುಳಿದಿದೆ. ಇಲ್ಲಿರುವ ಬಡ ಕುಟುಂಬಗಳಿಗೆ ಮೊಬೈಲ್ ಫೋನ್ ಕೂಡ ಇಲ್ಲ.