ಕರ್ನಾಟಕ

karnataka

ETV Bharat / bharat

ಕೇರಳದಲ್ಲಿ ನೈಲ್​ ಫಿವರ್​ಗೆ ಬಾಲಕ ಬಲಿ... ದೇವರ ನಾಡಲ್ಲಿ ಮತ್ತೆ ಸೃಷ್ಟಿಯಾಯ್ತು ಹೊಸ ವೈರಸ್​ ಭೀತಿ - kannada news

ಹಕ್ಕಿಗಳಿಂದ ಈ ವೈರಸ್​ ಸೃಷ್ಟಿಯಾಗಿದೆ ಎಂದು ಪ್ರಾಥಮಿಕ ಸಂಶೋಧನೆಯಿಂದ ತಿಳಿದುಬಂದಿದ್ದು, ಸೊಳ್ಳೆಗಳಿಂದ ಈ ರೋಗ ಹರಡುತ್ತಿದೆ. ಸದ್ಯ ಇದಕ್ಕೆ ಯಾವುದೇ ಔಷಧಗಳು ಇಲ್ಲ ಎಂದು ವೈದ್ಯರು ಹೇಳುತ್ತಿದ್ದಾರೆ.

ನೈಲ್​ ಫಿವರ್

By

Published : Mar 19, 2019, 8:18 AM IST

ತಿರುವನಂತಪುರ: ಬಾವಲಿ ಜ್ವರದ ಭೀತಿಯಿಂದ ಈಗಷ್ಟೆ ಹೊರಬಂದಿದ್ದ ಕೇರಳದಲ್ಲಿ ಈಗ ನೈಲ್​ ಫಿವರ್​ (ಕಡು ನೀಲಿ ಜ್ವರ) ಕಾಣಿಸಿಕೊಂಡಿದೆ.

ವೆಸ್ಟ್​ ನೈಲ್​ ಫಿವರ್​ನಿಂದ ಬಳಲುತ್ತಿದ್ದ ಆರು ವರ್ಷದ ಬಾಲಕನೊಬ್ಬ ಸಾವಿಗೀಡಾಗಿದ್ದು, ರಾಜ್ಯದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

ಹಕ್ಕಿಗಳಿಂದ ಈ ವೈರಸ್​ ಸೃಷ್ಟಿಯಾಗಿದೆ ಎಂದು ಪ್ರಾಥಮಿಕ ಸಂಶೋಧನೆಯಿಂದ ತಿಳಿದುಬಂದಿದ್ದು, ಸೊಳ್ಳೆಗಳಿಂದ ಈ ರೋಗ ಹರಡುತ್ತಿದೆ. ಸದ್ಯ ಇದಕ್ಕೆ ಯಾವುದೇ ಔಷಧಗಳು ಇಲ್ಲ ಎಂದು ವೈದ್ಯರು ಹೇಳುತ್ತಿದ್ದಾರೆ.

ಈ ರೋಗ ಮನುಷ್ಯನಿಂದ ಮನುಷ್ಯನಿಗೆ ಹರಡುವ ಸಾಂಕ್ರಾಮಿಕ ರೋಗವಲ್ಲ. ಸೊಳ್ಳೆಗಳು ರೋಗ ಹರಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಹಾಗಾಗಿ ಅದರ ಬಗ್ಗೆ ಎಚ್ಚರ ಇರಬೇಕು ಎಂದು ವೈದ್ಯರು ತಿಳಿಸಿದ್ದಾರೆ.

ರೋಗದ ಲಕ್ಷಣಗಳೇನು?

ನೈಲ್​ ಫಿವರ್​ ಮಲೇರಿಯಾ ರೋಗದ ಬಹುತೇಕ ಲಕ್ಷಣಗಳನ್ನು ಹೊಂದಿದೆ. ತೀವ್ರ ಜ್ವರ, 7 ದಿನಕ್ಕೂ ಹೆಚ್ಚು ಕಾಲ ಬಿಡದ ಫಿವರ್​. ಚಳಿಯ ಅನುಭವ, ಸುಸ್ತು, ವಾಂತಿ ಇದು ರೋಗದ ಲಕ್ಷಣಗಳು ಎಂದು ವೈದ್ಯರು ಹೇಳುತ್ತಾರೆ.

ABOUT THE AUTHOR

...view details