ಮದುವೆ ದಿಬ್ಬಣ ತೆರಳುತ್ತಿದ್ದ ಟ್ರ್ಯಾಕ್ಟರ್ ಉರುಳಿ 6 ಮಂದಿ ದುರ್ಮರಣ - ಖಾಲ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
17:12 December 03
ಮದುವೆ ದಿಬ್ಬಣ ತೆರಳುತ್ತಿದ್ದ ಟ್ರ್ಯಾಕ್ಟರ್ ಉರುಳಿ 6 ಮಂದಿ ದುರ್ಮರಣ
ಖಾಂಡ್ವಾ (ಮಧ್ಯಪ್ರದೇಶ): ಮದುವೆ ದಿಬ್ಬಣ ತೆರಳುತ್ತಿದ್ದ ಟ್ರ್ಯಾಕ್ಟರ್ ಉರುಳಿ 6 ಮಂದಿ ಸಾವನ್ನಪ್ಪಿ, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಇಲ್ಲಿನ ಖಾಂಡ್ವಾ ಬಳಿಯ ಖಾಲವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ಸಂಭವಿಸಿದ್ದು, ದಿಬ್ಬಣ ಹೊರಟಿದ್ದ ಟ್ರ್ಯಾಕ್ಟರ್ ನಾಲೆಗೆ ಉರುಳಿದೆ.
ಮೃತರಲ್ಲಿ ವರನೂ ಕೂಡಾ ಸೇರಿದ್ದು, ಗಾಯಾಳುಗಳನ್ನು ಖಾಂಡ್ವಾ ಜಿಲ್ಲಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದ್ದು, ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.