ಕರ್ನಾಟಕ

karnataka

ETV Bharat / bharat

ಗಂಗಾ ನದಿಯಲ್ಲಿ ಲಾಂಚ್ ಮಗುಚಿ ಇಬ್ಬರು ನಾಪತ್ತೆ

ಮಾಣಿಕ್​ಚಕ್ ಘಾಟ್ ಅನ್ನು ಮಾಲ್ಡಾ ಜಿಲ್ಲಾ ಪರಿಷತ್ ನಿರ್ವಹಿಸುತ್ತಿದೆ. ಎಂಟು ಟ್ರಕ್‌ಗಳನ್ನು ತುಂಬಿದ ಲಾಂಚ್ ಜಾರ್ಖಂಡ್‌ನ ರಾಜಮಹಲ್ ಘಾಟ್‌ನಿಂದ ಬಂದಿದೆ. ಮಣಿಕ್‌ಚಕ್ ಘಾಟ್‌ನಲ್ಲಿ ಟ್ರಕ್‌ಗಳನ್ನು ಇಳಿಸುವ ಸಮಯದಲ್ಲಿ ಲಾಂಚ್​ ಗಂಗಾ ನದಿಯಲ್ಲಿ ಮಗುಚಿ ಬಿದ್ದಿದೆ. ಆರಂಭದಲ್ಲಿ ಎಂಟು ಟ್ರಕ್‌ಗಳ ಜೊತೆಗೆ ಎಂಟು ಜನರು ನಾಪತ್ತೆಯಾಗಿದ್ದರು. ಅವರಲ್ಲಿ ಆರು ಜನರನ್ನು ಪತ್ತೆ ಮಾಡಲಾಗಿದೆ ಎಂದು ಮೊಂಡಾಲ್ ಹೇಳಿದರು.

launch capsized
ಲಾಂಚ್

By

Published : Nov 24, 2020, 8:34 AM IST

Updated : Nov 24, 2020, 1:28 PM IST

ಮಾಲ್ಡಾ (ಪಶ್ಚಿಮ ಬಂಗಾಳ):ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಗಂಗಾ ನದಿಯಲ್ಲಿ ಸೋಮವಾರ ಸಂಜೆ ಲಾಂಚ್ ಮಗುಚಿಬಿದ್ದು, ಅವಘಡದಲ್ಲಿ ಆರು ಜನರನ್ನು ರಕ್ಷಿಸಲಾಗಿದೆ ಮತ್ತು ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ರಾಜರ್ಷಿ ಮಿತ್ರ ತಿಳಿಸಿದ್ದಾರೆ.

ನಾಪತ್ತೆಯಾದವರ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಮಾಲ್ಡಾ ಜಿಲ್ಲಾ ಪರಿಷತ್ ಸಭಾಪತಿ ಗೌರ್ ಚಂದ್ರ ಮೊಂಡಲ್ ಅವರು ಸೋಮವಾರ ಮಾಣಿಕ್‌ಚಕ್‌ನಲ್ಲಿರುವ ಘಾಟ್‌ಗೆ ಭೇಟಿ ನೀಡಿದ್ದಾರೆ.

ಮೂರಂತಸ್ತಿನ ಕಟ್ಟಡ ಕುಸಿತ: ಓರ್ವ ಸಾವು, ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ

ಮಾಣಿಕ್​ಚಕ್ ಘಾಟ್ ಅನ್ನು ಮಾಲ್ಡಾ ಜಿಲ್ಲಾ ಪರಿಷತ್ ನಿರ್ವಹಿಸುತ್ತಿದೆ. ಎಂಟು ಟ್ರಕ್‌ಗಳನ್ನು ತುಂಬಿದ ಲಾಂಚ್ ಜಾರ್ಖಂಡ್‌ನ ರಾಜಮಹಲ್ ಘಾಟ್‌ನಿಂದ ಬಂದಿದೆ. ಮಣಿಕ್‌ಚಕ್ ಘಾಟ್‌ನಲ್ಲಿ ಟ್ರಕ್‌ಗಳನ್ನು ಇಳಿಸುವ ಸಮಯದಲ್ಲಿ ಲಾಂಚ್​ ಗಂಗಾ ನದಿಯಲ್ಲಿ ಮಗುಚಿದೆ. ಆರಂಭದಲ್ಲಿ ಎಂಟು ಟ್ರಕ್‌ಗಳ ಜೊತೆಗೆ ಎಂಟು ಜನರು ನಾಪತ್ತೆಯಾಗಿದ್ದರು. ಅವರಲ್ಲಿ ಆರು ಜನರನ್ನು ಪತ್ತೆ ಮಾಡಲಾಗಿದೆ ಎಂದು ಮೊಂಡಾಲ್ ಹೇಳಿದರು.

Last Updated : Nov 24, 2020, 1:28 PM IST

ABOUT THE AUTHOR

...view details