ಯವತ್ಮಾಲ್(ಮಹಾರಾಷ್ಟ್ರ):ಟಾಟಾ ಮ್ಯಾಜಿಕ್ ಮರಕ್ಕೆ ಡಿಕ್ಕಿ ಹೊಡೆದು ಆಳವಾದ ಕಾಲುವೆಗೆ ಉರುಳಿಬಿದ್ದ ಪರಿಣಾಮ 6 ಜನ ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿದ್ದಾರೆ.
ಅಂತ್ಯಸಂಸ್ಕಾರ ಮುಗಿಸಿ ಬರುತ್ತಿದ್ದವರ ಬೆನ್ನುಬಿದ್ದ ಜವರಾಯ... ಟಾಟಾ ಮ್ಯಾಜಿಕ್ ಪಲ್ಟಿಯಾಗಿ 6 ಜನ ಸಾವು, 15 ಮಂದಿ ಸ್ಥಿತಿ ಗಂಭೀರ - ಟಾಟಾ ಮ್ಯಾಜಿಕ್ ಪಲ್ಟಿಯಾಗಿ 6 ಸಾವು
ಅಂತ್ಯಸಂಸ್ಕಾರ ಮುಗಿಸಿ ಮನೆಗೆ ತೆರಳುತ್ತಿರುವ ವೇಳೆ ಟಾಟಾ ಮ್ಯಾಜಿಕ್ ವಾಹನ ಕಾಲುವೆಗೆ ಉರುಳಿಬಿದ್ದು 6 ಜನ ಸಾವಿಗೀಡಾಗಿದ್ದಾರೆ.
ಟಾಟಾ ಮ್ಯಾಜಿಕ್ ಪಲ್ಟಿ
ಕಲಂಬ್ ಪೊಲೀಸ್ ಠಾಣೆ ವ್ಯಾಪ್ತಿಯ ವಧೋನಾ ಖುರ್ದ್ ಗ್ರಾಮದ ಬಳಿಯ ಜೋಡ್ಮೋಹ ಬಳಿ ನಡೆದಿದೆ. ವಾಹನ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಕೋಟೇಶ್ವರದಲ್ಲಿ ಅಂತ್ಯಸಂಸ್ಕಾರ ಮುಗಿಸಿಕೊಂಡು ಸುಮಾರು 21 ಜನ ಮನೆಗೆ ವಾಪಸ್ ಆಗುತ್ತಿದ್ದರು ಎಂದು ತಿಳಿದುಬಂದಿದೆ. ಗಾಯಾಳುಗಳನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.