ದಿಯೋಗರ್(ಜಾರ್ಖಂಡ್) :ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ವಿಷಕಾರಿ ಅನಿಲ ಸೇವಿಸಿ ಇಬ್ಬರು ಕಾರ್ಮಿಕರು ಸೇರಿ ಆರು ಮಂದಿ ಮೃತಪಟ್ಟಿರುವ ಘಟನೆ ಜಾರ್ಖಂಡ್ನ ದಿಯೋಗರ್ನಲ್ಲಿ ನಡೆದಿದೆ.
ದಿಯೋಗರ್ನ ದೇವಿಪುರದ ಮನೆಯೊಂದರ ಶೌಚಾಲಯದ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ಈ ದುರಂತ ನಡೆದಿದೆ. ಮೊದಲು ಒಬ್ಬ ವ್ಯಕ್ತಿ ಟ್ಯಾಂಕ್‌ನೊಳಗಡೆ ಹೋಗಿದ್ದಾನೆ. ಆದರೆ, ಸ್ವಲ್ಪ ಸಮಯ ಕಳೆದರೂ ಯಾವುದೇ ಶಬ್ದ ಕೇಳಿದ ಕಾರಣ ಇನ್ನೊಬ್ಬ ಟ್ಯಾಂಕ್‌ನೊಳಗೆ ಇಳಿದಿದ್ದಾನೆ. ಹೀಗೆ ಒಬ್ಬರಾದ ಮೇಲೆ ಒಬ್ಬರಂತೆ ಇಳಿದ ಆರೂ ಮಂದಿ ಸಾವನ್ನಪ್ಪಿದ್ದಾರೆ.