ಮುಜಾಫರ್ಪುರ (ಬಿಹಾರ್) : ಅಕ್ಯುಟ್ ಎನ್‌ಸೆಫಾಲಿಟಿಸ್ ಸಿಂಡ್ರೋಮ್ (ಎಇಎಸ್) ಎಂಬ ಮಿದುಳು ಸಂಬಂಧಿ ರೋಗಕ್ಕೆ 83 ಮಕ್ಕಳು ಮೃತಪಟ್ಟ ಘಟನೆ ಬಿಹಾರದ ಮುಜಾಫರ್ ನಗರದಲ್ಲಿ ಸಂಭವಿಸಿದೆ.
ಮುಜಾಫರ್ಪುರದ ಶ್ರೀಕೃಷ್ಣ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (ಎಸ್ಕೆಎಂಸಿಎಚ್) ಕಳೆದ ಹಲವು ದಿನಗಳಿಂದ ಅಕ್ಯುಟ್ ಎನ್‌ಸೆಫಾಲಿಟಿಸ್ ಸಿಂಡ್ರೋಮ್ ಸಂಬಂಧಿತ ರೋಗದಿಂದ ಬಳಲುತ್ತಿದ್ದ ಮಕ್ಕಳು ಚಿಕಿತ್ಸೆಗೆ ದಾಖಲಾಗಿದ್ದರು. ನಿನ್ನೆ 6 ಮಕ್ಕಳು ಚಿಕತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದು, ಸಾವಿನ ಸಂಖ್ಯೆ 83ಕ್ಕೆ ತಲುಪಿದೆ.