ಸಂತಿನಿಕೇತನ (ಪಶ್ಚಿಮ ಬಂಗಾಳ) :ಕೊಲೆ ಸಂಚು ಹಿನ್ನೆಲೆ ಬಾಂಗ್ಲಾದೇಶದ ನಾಲ್ವರು ಆರೋಪಿಗಳು ಸೇರಿ ಒಟ್ಟು ಆರು ಮಂದಿ ದುಷ್ಕರ್ಮಿಗಳನ್ನು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ಇಲ್ಲಿನ ಬೋಲ್ಪುರದ ಉಪ ವಿಭಾಗೀಯ ನ್ಯಾಯಾಲಯ ಆದೇಶಿಸಿದೆ.
ಪ್ರಭಾವಿ ತೃಣಮೂಲ ಕಾಂಗ್ರೆಸ್ ಮುಖಂಡನ ಕೊಲೆಗೆ ಸಂಚು.. ಆರು ಮಂದಿ ದುಷ್ಕರ್ಮಿಗಳ ಬಂಧನ - ಕೊಲೆಗೆ ಸಂಚು
ಶಾಂತಿನಿಕೇತನ ಪೊಲೀಸ್ ಠಾಣೆಯ ಪ್ರದೇಶದಲ್ಲಿಯೇ ದುಷ್ಕರ್ಮಿಗಳು ಕೊಲೆಗೆ ಸಂಚು ಹಾಕಿ ಕುಳಿತಿದ್ದರು ಎಂದು ಬಿರ್ಭುಮ್ ಪೊಲೀಸ್ ವರಿಷ್ಠಾಧಿಕಾರಿ ಶ್ಯಾಮ್ ಸಿಂಗ್ ಹೇಳಿದ್ದಾರೆ..
ದುಷ್ಕರ್ಮಿಗಳ ಬಂಧನ
ಬಂಧಿತರು ಪ್ರಭಾವಿ ತೃಣಮೂಲ ಕಾಂಗ್ರೆಸ್ ನಾಯಕನೋರ್ವನನ್ನು ಕೊಲ್ಲುವ ಸಂಚು ರೂಪಿಸಿದ್ದರು. ಶಾಂತಿನಿಕೇತನ ಪೊಲೀಸ್ ಠಾಣೆಯ ಪ್ರದೇಶದಲ್ಲಿಯೇ ದುಷ್ಕರ್ಮಿಗಳು ಕೊಲೆಗೆ ಸಂಚು ಹಾಕಿ ಕುಳಿತಿದ್ದರು ಎಂದು ಬಿರ್ಭುಮ್ ಪೊಲೀಸ್ ವರಿಷ್ಠಾಧಿಕಾರಿ ಶ್ಯಾಮ್ ಸಿಂಗ್ ಹೇಳಿದ್ದಾರೆ.
9 ಎಂಎಂ ಪಿಸ್ತೂಲ್, ಗನ್, 5.6 ಕೆಜಿ ಸ್ಫೋಟಕಗಳನ್ನು ಒಳಗೊಂಡಂತೆ ಐದು ಬಂದೂಕುಗಳನ್ನು ಶಂಕಿತರಿಂದ ವಶಪಡಿಸಿಕೊಳ್ಳಲಾಗಿದೆ. ಸೈಯದ್ ಅನ್ವರ್ ಅಲಿ, ಕಾಜಲ್ ಶೇಖ್, ಬಾಬು ಸರ್ಕಾರ್, ಬಿಲಾಲ್ ಹೊಸೈನ್, ದಿಲ್ಬಾರ್ ಮಿಯಾ, ಮೊಹ್ಮದ್ ಮುರಾದ್ ಮುರ್ಷಾದ್ ಬಂಧಿತ ಆರೋಪಿಗಳು.