ಕರ್ನಾಟಕ

karnataka

ETV Bharat / bharat

ಮಾಡಿದ ಸಾಲಕ್ಕಾಗಿ ಅಪ್ರಾಪ್ತೆಯನ್ನ ಮುದುಕನಿಗೆ ಕೊಟ್ಟು ಮದುವೆ ಮಾಡಿದ ಚಿಕ್ಕಮ್ಮ: ಆರು ಜನರ ಬಂಧನ - ಬಾಲಕಿಯ ಮೇಲೆ ಅತ್ಯಾಚಾರ

ಮಾಡಿದ ಸಾಲಕ್ಕಾಗಿ ಅಪ್ರಾಪ್ತೆಯನ್ನು ಕೊಟ್ಟು ಮದುವೆ ಮಾಡಿದ ಘಟನೆ ಹೈದರಾಬಾದ್​​ನಲ್ಲಿ ನಡೆದಿದೆ. ಈ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ಮದುವೆಯಾದ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ. ಮುಂದೆ ನಿಂತು ಮದುವೆ ಮಾಡಿದ ಬಾಲಕಿಯ ಪೋಷಕರು ಸೇರಿದಂತೆ ಒಟ್ಟು ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.

Six held over illegal marriage of minor girl to 57-year-old man in Hyderabad
ಸಂಗ್ರಹ ಚಿತ್ರ

By

Published : Dec 31, 2020, 5:31 PM IST

ಹೈದರಾಬಾದ್: 57 ವರ್ಷದ ವ್ಯಕ್ತಿಯೊಂದಿಗೆ ಅಪ್ರಾಪ್ತೆಯನ್ನು ಕೊಟ್ಟು ಮದುವೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಒಟ್ಟು ಆರು ಜನ ಆರೋಪಿಗಳನ್ನು ಬಂಧಿಸಿದ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಮದುವೆಯ ಬಳಿಕ ವ್ಯಕ್ತಿ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ ಎನ್ನಲಾಗುತ್ತಿದೆ.

ಈ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ಮದುವೆಯಾದ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಮದುವೆಯಾದ ವ್ಯಕ್ತಿ ಈ ಹಿಂದೆಯೂ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಲ ಮಾಡಿಕೊಂಡಿದ್ದ ಬಾಲಕಿಯ ಚಿಕ್ಕಮ್ಮ ಆ ವ್ಯಕ್ತಿಯಿಂದ ಇತ್ತೀಚೆಗೆ 2 ಲಕ್ಷ ರೂ. ಹಣವನ್ನು ತೆಗೆದುಕೊಂಡಿದ್ದರಂತೆ. ಹಣ ನೀಡಿದ ಬಳಿಕ ವ್ಯಕ್ತಿ ಅಪ್ರಾಪ್ತೆಯನ್ನು ಮದುವೆಯಾಗಲು ದುಂಬಾಲು ಬಿದ್ದಿದ್ದನಂತೆ. ಹಾಗಾಗಿ ಅನ್ಯ ದಾರಿ ಕಾಣದ ಬಾಲಕಿಯ ಪೋಷಕರು ಮದುವೆ ಮಾಡಿಕೊಟ್ಟಿದ್ದರು.

ಸುಳ್ಳು ದಾಖಲೆಗಳನ್ನು ನೀಡಿ ಈ ಮದುವೆ ಮಾಡಲಾಗಿದ್ದು, ಬಾಲಕಿಯ ಚಿಕ್ಕಮ್ಮ ಸೇರಿದಂತೆ ಒಟ್ಟು ಆರು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪರಾರಿಯಾಗಿರುವ ಇತರ ಆರೋಪಿಗಳನ್ನು ಬಂಧಿಸಲು ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.

ABOUT THE AUTHOR

...view details