ಕರಾಚಿ:ರಕ್ಕಸ ಕೊರೊನಾ ವೈರಸ್ ವಿರುದ್ಧ ಹೋರಾಡಲು ಇಡೀ ವಿಶ್ವವೇ ಒಂದಾಗಿದ್ದು, 150ಕ್ಕೂ ಹೆಚ್ಚು ದೇಶಗಳಲ್ಲಿ ಲಗ್ಗೆ ಹಾಕಿರುವ ಈ ಮಾರಕ ಸೋಂಕು ಇದೀಗ ಎಲ್ಲರ ನಿದ್ದೆಗೆಡಿಸಿದೆ. ಇದರ ಮಧ್ಯೆ ಪಾಕಿಸ್ತಾನದಲ್ಲಿ ಅಧಿಕಾರಿಗಳು ಇದೇ ವೈರಸ್ನಿಂದ ಬಳಲುತ್ತಿದ್ದ ವ್ಯಕ್ತಿಯೋರ್ವನೊಂದಿಗೆ ಸೆಲ್ಫಿ ತೆಗೆದುಕೊಂಡು ಪೇಚಾಟಕ್ಕೆ ಸಿಲುಕಿದ್ದಾರೆ.
ಕೊರೊನಾ ಸೋಂಕಿತ ವ್ಯಕ್ತಿ ಜತೆ ಸೆಲ್ಫಿ... ಆರು ಸಿವಿಲ್ ಅಧಿಕಾರಿಗಳು ಅಮಾನತು - ಸೋಂಕಿತನೊಂದಿಗೆ ಸೆಲ್ಫಿ
ಮಹಾಮಾರಿ ಕೊರೊನಾ ವಿರುದ್ಧ ಹೋರಾಟ ನಡೆಸಲು ಇಡೀ ವಿಶ್ವವೇ ಒಂದಾಗಿದ್ದು, ಇದರ ಮಧ್ಯೆ ಪಾಕ್ ಅಧಿಕಾರಿಗಳು ಮಾಡಿರುವ ಯೆಡವಟ್ಟು ಅಲ್ಲಿನ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ.
ಪಾಕಿಸ್ತಾನದಲ್ಲಿ ಕೊರೊನಾ ವೈರಸ್ನಿಂದ ಬಳಲುತ್ತಿರುವ ಸಂಖ್ಯೆ ಈಗಾಗಲೇ 892ರ ಗಟಿ ದಾಟಿದೆ. ದಿನದಿಂದ ದಿನಕ್ಕೆ ಅದರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ತಡೆಗಟ್ಟಲು ಅಲ್ಲಿನ ಸರ್ಕಾರ ಹರಸಾಹಸ ಪಡುತ್ತಿದೆ. ಇದರ ಮಧ್ಯೆ ಕೊರೊನಾ ಸೋಂಕಿತ ವ್ಯಕ್ತಿ ಜತೆ ಸೆಲ್ಫಿ ತೆಗೆದುಕೊಂಡು ಅದನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಘಟನೆ ನಡೆದಿದೆ.
ಪಾಕಿಸ್ತಾನ ಸಿಂಧ್ ಪ್ರಾಂತ್ಯದಲ್ಲಿ ಕೊರೊನಾ ವೈರಸ್ನಿಂದ ಬಳಲುತ್ತಿದ್ದ ರೋಗಿ ಜತೆ ಆರು ಮಂದಿ ಸಿವಿಲ್ ಅಧಿಕಾರಿಗಳು ಸೆಲ್ಫಿ ತೆಗೆದುಕೊಂಡು ಅದನ್ನ ಸಾಮಾಜಿ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದರಿಂದ ಆಕ್ರೋಶಗೊಂಡಿರುವ ಪಾಕಿಸ್ತಾನ ಸರ್ಕಾರ ಅವರನ್ನ ತಕ್ಷಣವೇ ಅಮಾನತುಗೊಳಿಸಿ ಆದೇಶ ಹೊರಹಾಕಿದೆ.