ಬೆಂಗಳೂರು: ಚಂದ್ರಯಾನ2 ಯೋಜನೆಯ ಪ್ರಮುಖ ಘಟ್ಟವಾದ ವಿಕ್ರಮ್ ಲ್ಯಾಂಡರ್, ಲ್ಯಾಂಡಿಂಗ್ ವೇಳೆ ಸಂಪರ್ಕ ಕಳೆದುಕೊಂಡ ಹಿನ್ನೆಲೆ ದುಃಖಿತರಾದ ಇಸ್ರೋ ಅಧ್ಯಕ್ಷ ಶಿವನ್ ಅವರು ಕಣ್ಣೀರಿಟ್ಟಿದ್ದನ್ನು ಕಂಡ ಪ್ರಧಾನಿ ಮೋದಿ ಅವರು ಅವರನ್ನು ತಬ್ಬಿ ಸಂತೈಸಿದರು.
ಇಂದು ಬೆಳಗ್ಗೆ 8 ಗಂಟೆಗೆ ಬೆಂಗಳೂರಿನ ಇಸ್ರೋ ನಿಯಂತ್ರಣ ಕೇಂದ್ರದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿ ಹೊರ ಬಂದ ಬಳಿಕ ಎಲ್ಲ ವಿಜ್ಞಾನಿಗಳಿಗೂ ಮೋದಿ ಧೈರ್ಯ ತುಂಬಿದರು.