ವಿಶಾಖಪಟ್ಟಣ: ಮಾರಣಾಂತಿಕ ಸ್ಟೈರೀನ್ ಮೊನೊಮರ್ ಅನಿಲ ಸೋರಿಕೆಯಿಂದ ಉಂಟಾಗಿದ್ದ ಆರ್.ಜಿ.ವೆಂಕಟಪುರಂ ಗ್ರಾಮದಲ್ಲಿನ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿದೆ ಎಂದು ಆಂಧ್ರ ಪ್ರದೇಶ ಸರ್ಕಾರ ತಿಳಿಸಿದೆ. ಎಲ್‌ಜಿ ಪಾಲಿಮರ್ಸ್ ಸ್ಥಾವರದಿಂದ ಅನಿಲ ಸೋರಿಕೆಯಾಗಿ 12 ಮಂದಿ ಸಾವನ್ನಪ್ಪಿದ್ದು, ಮತ್ತು 300ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪೊಲೀಸ್ ಮಹಾನಿರ್ದೇಶಕ ಡಿ.ಗೌತಮ್ ಸಾವಂಗ್ ಮತ್ತು ವಿಶೇಷ ಮುಖ್ಯ ಕಾರ್ಯದರ್ಶಿ (ಕೈಗಾರಿಕೆಗಳು) ಕರಿಕಲ್ ವಲವೆನ್ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆವಿ ಸೋರಿಕೆ ಸಂಭವಿಸಿದ ಸ್ಟೈರೀನ್ ಶೇಖರಣಾ ತೊಟ್ಟಿಯಲ್ಲಿನ ತಾಪಮಾನ ಕಡಿಮೆಯಾಗಿದೆ. ಹಾಗೆಯೇ ಪಿಪಿಎಂ (ಸುತ್ತುವರಿದ ಗಾಳಿಯ ಗುಣಮಟ್ಟ) ಮಟ್ಟವೂ ಸರಿಯಾಗಿದೆ. ಚಿಂತೆ ಮಾಡುವ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿ ಸಹಜ ಸ್ಥಿತಿಗೆ ಬರುತ್ತದೆ ಎಂದು ಹೇಳಿದರು.