ಮುಂಬೈ:ಕುಸಿಯುತ್ತಿರುವ ಆರ್ಥಿಕತೆ ಮೇಲೆತ್ತಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತೆಗೆದುಕೊಂಡ ಕೆಲ ತೀರ್ಮಾನಗಳಿಂದಾಗಿ ಸತತವಾಗಿ ಕುಸಿತದ ಹಾದಿ ಹಿಡಿದಿದ್ದ ಷೇರುಪೇಟೆ ಇವತ್ತು ಚೆಂಗನೇ ಎದ್ದು ನಿಂತಿದೆ.
ಸಾರ್ವಜನಿಕ ವಲಯದ ಬ್ಯಾಂಕ್ಗಳ ಷೇರುಗಳು ಶೇ 2ರಷ್ಟು ಏರಿಕೆ ಕಂಡಿದ್ದು, ಸೆನ್ಸೆಕ್ಸ್ 793 ಅಂಕಗಳಷ್ಟು ಏರಿಕೆ ಕಂಡು, ದಿನದಾಂತ್ಯಕ್ಕೆ 37,494.12 ರಷ್ಟು ಏರಿಕೆ ಕಂಡಿತು. ಇನ್ನು ರಾಷ್ಟ್ರೀಯ ಷೇರುಪೇಟೆ ನಿಫ್ಟಿ 228.50 ರಷ್ಟು ಏರಿಕೆ ದಾಖಲಿಸಿ 11ಸಾವಿರದ ಗಡಿ ದಾಟಿತು.
ಫಲ ನೀಡಿದ ಸೀತಾರಾಮನ್ ಕ್ರಮ: ಷೇರುಪೇಟೆ 800 ಅಂಕ ಏರಿಕೆ - ಆರ್ಥಿಕತೆ ಉತ್ತೇಜನ ಕ್ರಮ
ಆರ್ಥಿಕ ಉತ್ತೇಜನಕ್ಕಾಗಿ ಕಳೆದ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ, 32 ಮಹತ್ವದ ಅಂಶ ಘೋಷಣೆ ಮಾಡಿದ್ದ ನಿರ್ಮಲಾ ಸೀತಾರಾಮನ್ ಅವರ ಕ್ರಮ ಕೊನೆಗೂ ಯಶಸ್ವಿಯಾಗುತ್ತಿದ್ದು, ಇದರ ಫಲವಾಗಿ ಮುಂಬೈ ಷೇರುಪೇಟೆಯಲ್ಲಿ ಇಂದು 793 ಅಂಕಗಳ ಏರಿಕೆ ಕಂಡು ಬಂದಿದೆ.
ಸಾರ್ವಜನಿಕ ವಲಯದ ಬ್ಯಾಂಕ್ಗಳಿಗೆ 70 ಸಾವಿರ ಕೋಟಿ ರೂ.ನೆರವು ಘೊಷಿಸುವ ಮೂಲಕ ಅವುಗಳ ಚೇತರಿಕೆಗೆ ನಿರ್ಧಾರ ಕೈಗೊಂಡಿದ್ದರು. ಇನ್ನು ವಿದೇಶಿ ಹೂಡಿಕೆದಾರರ ಮೇಲೆ ಹೆಚ್ಚುವರಿ ಸರ್ಚಾರ್ಜ್ ವಾಪಸ್ ಪಡೆಯುವ ಘೋಷಣೆ ಮಾಡಿದ್ದು, ಸಹ ಇಂದಿನ ಷೇರುಪೇಟೆ ಚೇತರಿಕೆಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಕಳೆದ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಆರ್ಥಿಕತೆ ಉತ್ತೇಜನ ಮತ್ತು ಎಫ್‌ಪಿಐ ಹೆಚ್ಚುವರಿ ಶುಲ್ಕ ಕಡಿತದಂತಹ ಹಲವಾರು ಕ್ರಮಗಳನ್ನು ಘೋಷಿಸಿದ ನಂತರ ಬೆಂಚ್‌ಮಾರ್ಕ್ ಸೂಚ್ಯಂಕಗಳು ದಿನದ ಗರಿಷ್ಠ ಮಟ್ಟಕ್ಕೆ ತಲುಪಿದವು.ಆರ್ಥಿಕತೆಗೆ ವೇಗೆ ನೀಡುವ ಹಿನ್ನೆಲೆಯಲ್ಲಿ ತೆರಿಗೆ ಹೆಚ್ಚುವರಿ ಶುಲ್ಕವನ್ನು ಹಿಂತೆಗೆದುಕೊಳ್ಳುವುದರಿಂದ ಹಿಡಿದು ವಾಹನ ವಲಯದ ನಿಯಮಗಳ ಪರಿಷ್ಕರಣೆಯವರೆಗೆ ಸಡಿಲಿಕೆ ಮಾಡಲಾಯಿತು. ಹೂಡಿಕೆದಾರರಿಗೆ ಉತ್ತೇಜನ ನೀಡುವ ಮತ್ತು ಆರ್ಥಿಕತೆಯನ್ನು ಹೆಚ್ಚಿಸುವ ಕ್ರಮಗಳನ್ನು ಸರ್ಕಾರ ಘೋಷಿಸಿತು.