ತೆಲಂಗಾಣ: ದಿಶಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡೀ ದೇಶವೇ ನಿಬ್ಬೆರಗಾಗುವಂತೆ ಅತ್ಯಾಚಾರ ನಡೆದ 9 ದಿನಕ್ಕೆ ಶಿಕ್ಷೆ ವಿಧಿಸಿದ ತೆಲಂಗಾಣ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾದರೆ, ಪೊಲೀಸರು ಮಾತ್ರ ಈಗ ಕಾನೂನಿಗೆ ತಕ್ಕ ಉತ್ತರ ನೀಡಬೇಕಾಗಿದೆ.
ದಿಶಾ ಅತ್ಯಾಚಾರ, ಕೊಲೆ ಪ್ರಕರಣ: ಎನ್‌ಕೌಂಟರ್ ಬಗ್ಗೆ ತನಿಖೆ ನಡೆಸಲು ಎಸ್‌ಐಟಿ ರಚನೆ - SIT structure to investigate the encounter
ತೆಲಂಗಾಣ ಸರ್ಕಾರ ಈ ಸಂಬಂಧ ಎನ್‌ಕೌಂಟರ್ ಪ್ರಕರಣದ ವಿಚಾರಣೆ ನಡೆಸಲು ಎಸ್‌ಐಟಿ ತಂಡ ರಚನೆ ಮಾಡಿದೆ. ರಾಚಕೊಂಡ ಪೊಲೀಸ್ ಆಯುಕ್ತ ಮಹೇಶ್ ಭಾಗವತ್ ಅವರು ಏಳು ಸದಸ್ಯರನ್ನೊಳಗೊಂಡ ಎಸ್‌ಐಟಿ ತಂಡವನ್ನು ಮುನ್ನಡೆಸಲಿದ್ದಾರೆ.
ಎನ್‌ಕೌಂಟರ್ ಬಗ್ಗೆ ತನಿಖೆ ನಡೆಸಲು ಎಸ್‌ಐಟಿ ರಚನೆ
ತೆಲಂಗಾಣ ಸರ್ಕಾರ ಈ ಸಂಬಂಧ ಎನ್‌ಕೌಂಟರ್ ಪ್ರಕರಣದ ವಿಚಾರಣೆ ನಡೆಸಲು ಎಸ್‌ಐಟಿ ತಂಡ ರಚನೆ ಮಾಡಿದೆ. ರಾಚಕೊಂಡ ಪೊಲೀಸ್ ಆಯುಕ್ತ ಮಹೇಶ್ ಭಾಗವತ್ ಅವರು ಏಳು ಸದಸ್ಯರನ್ನೊಳಗೊಂಡ ಎಸ್‌ಐಟಿ ತಂಡವನ್ನು ಮುನ್ನಡೆಸಲಿದ್ದಾರೆ.
ನವೆಂಬರ್ 28 ಬುಧವಾರ, ಮೊಹಮದ್ ಆರಿಫ್, ಚಿಂತಕುಂಟ ಚೆನ್ನಕೇಶವುಲು, ಜೊಲ್ಲು ಶಿವ ಹಾಗೂ ಜೊಲ್ಲು ನವೀನ್ ಎಂಬ ಆರೋಪಿಗಳು ಪಶುವೈದ್ಯೆಯನ್ನು ಅತ್ಯಾಚಾರ ಮಾಡಿ ಬೆಂಕಿಹಚ್ಚಿ ಕ್ರೂರವಾಗಿ ಕೊಂದಿದ್ದರು. ಘಟನೆಗೆ ಸಂಬಂಧಿಸಿದಂತೆ ದೇಶದ ನಾನಾ ಕಡೆ ತ್ವರಿತ ನ್ಯಾಯಕ್ಕಾಗಿ ಆಗ್ರಹ ಕೇಳಿಬಂದಿತ್ತು.
Last Updated : Dec 9, 2019, 6:37 AM IST