ಕರ್ನಾಟಕ

karnataka

ETV Bharat / bharat

JNU ಹಿಂಸಾಚಾರಕ್ಕೆ ಮಹತ್ವದ ಟ್ವಿಸ್ಟ್​... ಮಾಸ್ಕ್​ ಧರಿಸಿದ್ದ ವಿದ್ಯಾರ್ಥಿನಿ ಯಾರು ಗೊತ್ತೆ?

ಜವಾಹರ್​​​ಲಾಲ್​ನೆಹರೂ ವಿಶ್ವವಿದ್ಯಾಲಯದಲ್ಲಿ ಕಳೆದ ವಾರ ಮಾಸ್ಕ್ ಧರಿಸಿದ್ದ ದುಷ್ಕರ್ಮಿಗಳ ಗುಂಪೊಂದು ಜೆಎನ್​ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ಉಪನ್ಯಾಸಕರ ಮೇಲೆ ಹಲ್ಲೆ ನಡೆಸಿತ್ತು. ಘಟನೆಯಲ್ಲಿ ಐಷೆ ಘೋಷ್ ಹಾಗೂ ಪದಾಧಿಕಾರಿ ಸೇರಿ ಹಲವು ವಿದ್ಯಾರ್ಥಿಗಳ ಗಾಯಗೊಂಡಿದ್ದರು. ಹಲ್ಲೆ ನಡೆಸಿದ್ದ ವಿಡಿಯೋದಲ್ಲಿ ಸೆರೆಯಾಗಿದ್ದ ಮಾಸ್ಕ್​ ಧರಸಿದ್ದು ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಎಂದು ಎಸ್​ಐಟಿ ತಂಡ ತನಿಖೆಯಿಂದ ಪತ್ತೆಹಚ್ಚಿದೆ.

By

Published : Jan 13, 2020, 7:42 AM IST

masked woman
ಮಾಸ್ಕ್​ ಧರಿಸಿದ್ದ ಗುಂಪು

ನವದೆಹಲಿ:ದೆಹಲಿಯ ಪ್ರತಿಷ್ಠಿತ ಜವಾಹರ್​ಲಾಲ್​ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್​ಯು) ನಡೆದಿದ್ದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದ ಮಾಸ್ಕ್​ ಧರಿಸಿದ್ದ ವಿಧ್ಯಾರ್ಥಿಯನ್ನು ದೆಹಲಿ ಪೊಲೀಸರ ವಿಶೇಷ ತನಿಖಾ ತಂಡ (ಎಸ್​ಐಟಿ) ಪತ್ತೆಹಚ್ಚಿದೆ.

ಜವಾಹರ್​​ಲಾಲ್ ​ನೆಹರೂ ವಿಶ್ವವಿದ್ಯಾಲಯದಲ್ಲಿ ಕಳೆದ ವಾರ ಮಾಸ್ಕ್ ಧರಿಸಿದ್ದ ದುಷ್ಕರ್ಮಿಗಳ ಗುಂಪೊಂದು ಜೆಎನ್​ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ಉಪನ್ಯಾಸಕರ ಮೇಲೆ ಹಲ್ಲೆ ನಡೆಸಿತ್ತು. ಘಟನೆಯಲ್ಲಿ ಐಷೆ ಘೋಷ್ ಹಾಗೂ ಪದಾಧಿಕಾರಿ ಸೇರಿ ಹಲವು ವಿದ್ಯಾರ್ಥಿಗಳ ಗಾಯಗೊಂಡಿದ್ದರು. ಇದರಲ್ಲಿ ಮಾಸ್ಕ್​ ಧರಿಸಿದ್ದ ಮಹಿಳೆಯೊಬ್ಬರೂ ಇದ್ದರು.

ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ದೆಹಲಿ ಪೊಲೀಸರು ವಿಶೇಷ ತನಿಖಾ ತಂಡ, ಹಲ್ಲೆ ನಡೆಸಿದ್ದ ವಿಡಿಯೋದಲ್ಲಿ ಸೆರೆಯಾಗಿದ್ದ ಮಾಸ್ಕ್​ ಧರಸಿದ್ದು ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಎಂದು ಗುರುತಿಸಿದ್ದಾರೆ. ಶೀಘ್ರವೇ ಅವರಿಗೆ ನೋಟಿಸ್​ ನೀಡಿ ತನಿಖೆಗೆ ಸಹಕರಿಸುವಂತೆ ಸೂಚಿಸಲಾಗುವುದು ಎಂದು ತಂಡದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ABOUT THE AUTHOR

...view details