ಇಂದೋರ್(ಮಧ್ಯಪ್ರದೇಶ): ಹನಿ ಟ್ರ್ಯಾಪ್ ಪ್ರಕರಣದಲ್ಲಿ ಬಂಧನವಾಗಿರುವ ಆರತಿ ದಯಾಳ್ ಮತ್ತು ನಾಲ್ವರು ಆರೋಪಿಗಳ ಮೇಲೆ ಮಾನವ ಕಳ್ಳಸಾಗಣೆ ಮತ್ತು ಲೈಂಗಿಕ ಶೋಷಣೆ ಆರೋಪದ ಅಡಿ ಪ್ರಕರಣ ದಾಖಲಾಗಿದೆ.
ಇಂದೋರ್ ಮಹಾನಗರ ಪಾಲಿಕೆ ಅಧಿಕಾರಿಯೊಬ್ಬರು 3 ಕೋಟಿ ರೂಪಾಯಿ ಹಣ ನೀಡುವಂತೆ ಕೆಲವರು ಬೆದರಿಕೆ ಹಾಕುತಿದ್ದಾರೆ ಎಂದು ದೂರು ದಾಖಲಿಸಿದ್ದರು. ಪ್ರಕರಣ ಬೆನ್ನು ಬಿದ್ದ ಪೊಲೀಸರು ಖತರ್ನಾನಾಕ್ ಹನಿ ಟ್ರ್ಯಾಪ್ ಗ್ಯಾಂಗ್ ಅನ್ನ ಬಂಧಿಸಿದೆ. ಅರತಿ ದಯಾಳ್, ಓಂಪ್ರಕಾಶ್ ಕೊರಿ, ಶ್ವೇತಾ ವಿಜಯ್ ಜೈನ್, ಶ್ವೇತಾ ಸ್ವಪ್ನಿಲ್ ಜೈನ್ ಮತ್ತು ಬರ್ಖಾ ಸೋನಿ ಎಂಬ ಐವರು ಆರೋಪಿಗಳು ಈಗ ಪೊಲೀಸರ ವಶದಲ್ಲಿದ್ದಾರೆ.
ಬಂಧನಕ್ಕೊಳಗಾಗಿರುವ ಯುವತಿಯ ತಂದೆಯ ದೂರಿನಂತೆ ಪೊಲೀಸರು ಮತ್ತೊಂದು ಎಫ್ಐಆರ್ ದಾಖಲಿಸಿದ್ದಾರೆ. ನನ್ನ ಪುತ್ರಿಯನ್ನ ಈ ಗ್ಯಾಂಗ್ನವರು ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸಿ, ಆಕೆಯನ್ನ ಟ್ರ್ಯಾಪ್ ಮಾಡಿ ಈ ದಂಧೆಗೆ ಬಳಸಿಕೊಂಡಿದ್ದಾರೆ ಎಂದು ಆರೋಪಿ ತಂದೆ ದೂರಿದ್ದಾರೆ.