ಕರ್ನಾಟಕ

karnataka

ETV Bharat / bharat

ಹಥ್ರಾಸ್​ ತನಿಖಾಧಿಕಾರಿಗಳು ಯುಪಿ ಸರ್ಕಾರದ ಕೈಗೊಂಬೆಗಳು: ಕಾಂಗ್ರೆಸ್ ಆರೋಪ

ಹಥ್ರಾಸ್ ಅತ್ಯಾಚಾರ ಪ್ರಕರಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಶೇಷ ತನಿಖಾಧಿಕಾರಿಗಳೆಲ್ಲರೂ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ "ಕೈಗೊಂಬೆಗಳಾಗಿ" ವರ್ತಿಸುತ್ತಿದ್ದಾರೆ ಎಂದು ಕಾಂಗ್ರೆಸ್​ ಆರೋಪಿಸಿದೆ.

Sushmita Dev
Sushmita Dev

By

Published : Oct 5, 2020, 4:27 PM IST

ನವದೆಹಲಿ: ಹಥ್ರಾಸ್ ಪ್ರಕರಣದ ವಿಶೇಷ ತನಿಖಾಧಿಕಾರಿಗಳು (ಎಸ್​ಐಟಿ) ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ "ಕೈಗೊಂಬೆಗಳಾಗಿ" ವರ್ತಿಸುತ್ತಿದ್ದು, ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆ ನಡೆಸಬೇಕೆಂದು ಕಾಂಗ್ರೆಸ್ ಪಕ್ಷ ಸೋಮವಾರ ಒತ್ತಾಯಿಸಿದೆ.

ಹಿರಿಯ ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಭಗವಾನ್ ಸ್ವರೂಪ್ ನೇತೃತ್ವದ ಎಸ್‌ಐಟಿ ತಂಡವು ಕೇಂದ್ರ ತನಿಖಾ ದಳವನ್ನು (ಸಿಬಿಐ) ವಹಿಸಿಕೊಳ್ಳಲು ಕೇಳಿಕೊಂಡಿದ್ದರೂ ಸಹ ತನ್ನ ತನಿಖೆಯನ್ನು ಮುಂದುವರಿಸಿದೆ ಎಂದು ಕಾಂಗ್ರೆಸ್​ ಆರೋಪಿಸಿದೆ.

ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಮುಖ್ಯಸ್ಥೆ ಸುಷ್ಮಿತಾ ದೇವ್

ಈ ಬಗ್ಗೆ ಮಾತನಾಡಿದ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಮುಖ್ಯಸ್ಥೆ ಸುಷ್ಮಿತಾ ದೇವ್, ಅಸಹಾಯಕ ಬಾಲಕಿ ಮೇಲೆ ಅತ್ಯಾಚಾರ ನಡೆದ ದಿನದಿಂದ ಇಲ್ಲಿಯವರೆವಿಗೂ ಎಸ್‌ಐಟಿ ಸೇರಿ ಉತ್ತರ ಪ್ರದೇಶದ ಎಲ್ಲ ಸಂಸ್ಥೆಗಳು ಈ ವಿಷಯವನ್ನು ಮುಚ್ಚಿಹಾಕಲು ಎಲ್ಲಾ ತಂತ್ರಗಳನ್ನು ನಡೆಸುತ್ತಿವೆ. ಘಟನೆ ನಡೆದು 14 ದಿನ ಕಳೆದರೂ ಎಸ್​ಐಟಿ ತಂಡ ಸ್ಥಳಕ್ಕೆ ಹೋಗಿಲ್ಲ ಎಂದು ಆರೋಪಿಸಿದರು.

ಎಸ್​ಐಟಿ ತಂಡದಲ್ಲಿ ಇರುವವರೆಲ್ಲರೂ ಯೋಗಿ ಆದಿತ್ಯನಾಥ್ ಅವರ ಕೈಗೊಂಬೆಗಳು ಎಂಬುದರ ಬಗ್ಗೆ ಬಹಿರಂಗವಾಗಿದೆ. ತನಿಖಾಧಿಕಾರಿಗಳು ಬಾಲಕಿಯ ಬಗ್ಗೆ ಮಾತನಾಡುತ್ತಿಲ್ಲ ಬದಲಾಗಿ ಸರ್ಕಾರದ ಬಗ್ಗೆ ಯೋಚನೆ ಮಾಡುತ್ತಿದೆ. ಇದನ್ನು ಗಮನಿಸಿದರೆ ಪ್ರಸ್ತುತ ಇರುವ ಎಸ್​ಐಟಿಯನ್ನು ತನಿಖೆ ಮಾಡಲು ಮತ್ತೊಂದು ಎಸ್​ಐಟಿ ಬೇಕಾಗಿದೆ ಎಂದರು.

ಶನಿವಾರ ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಹಥ್ರಾಸ್​ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಕುಟುಂಬಕ್ಕೆ ಭೇಟಿ ನೀಡಿದರು. ಸಭೆಯ ನಂತರ ಪ್ರಿಯಾಂಕಾ ಗಾಂಧಿ ತಮ್ಮ ಟ್ವೀಟ್‌ನಲ್ಲಿ ಸಂತ್ರಸ್ತೆಯ ಕುಟುಂಬದ ಬೇಡಿಕೆಗಳನ್ನು ಹಂಚಿಕೊಂಡಿದ್ದು, ಯುಪಿ ಸರ್ಕಾರ ಅವರಿಗೆ ಉತ್ತರಿಸಬೇಕು ಎಂದರು.

___________________________________________________________________________________

‘New Delhi: Congress party, on Monday, demanded a Supreme Court-monitored enquiry in the Hathras gang rape and murder case, alleging that the members of Special Investigation Team (SIT) are acting as the "puppets" of Uttar Pradesh Chief Minister Yogi Adityanath.

The SIT team led by senior Indian Police Service (IPS) officer Bhagwan Swaroop is still continuing with its investigation even as the Central Bureau of Investigation (CBI) has been asked to take over.

While addressing a press conference, All India Mahila Congress Chief, Sushmita Dev said, "It is clear that from the date a young helpless girl was raped, that all institutions within the state of Uttar Pradesh, whether it is the SIT, are in cahoots to hush up this matter. It is shocking that SIT was set up after 14 days. CBI enquiry has been ordered but as of today they have not gone on the ground."

The report of Forensic Science Laboratory (FSL) in Agra, suggest that there were "no songs suggestive of intercourse", backing the state police's version that she was not raped. However, experts are questioning the report saying that the samples were collected 11 days after the assault.

Sushmita Dev further added, "This stands exposed of the puppets of Yogi Adityanath who have been put in the SIT. They are shameless to talk about what is harming Adityanath Government and not what happened to the 19-year old girl. There should be an SIT to investigate this current SIT."

Also read:Hathras case: Security agencies uncover plot to incite caste riots, defame UP govt

On Saturday, Congress leaders Rahul Gandhi and Priyanka Gandhi visited the family of Hathras gang-rape victim. After the meeting, Priyanka Gandhi shared the demands of the victim's family in her tweet, saying that the UP Government must answer them.

Reiterating the demands, Sushmita Dev said, "Firstly, family demands a Supreme Court-monitored judicial inquiry. Secondly, right now, although the government has announced CBI investigation, on the ground still as it is investigating. Why? we reiterate that judicial enquiry is the need of the hour as demanded by the family."

Congress also demanded an immediate suspension of Hathras DM who was caught on camera, asking the victim's family to soften their stance.

Amid the widespread outrage over the matter, the victim's family has also questioned if the "right" body was cremated by UP Police.

Congress is also holding a 'Satyagrah' across the country to demand justice for the Hathras victim, under which all the state units of the party will have a silent sit-in protest in front of a Gandhi Statue or Ambedkar Statue.

ABOUT THE AUTHOR

...view details