ಥ್ರಿಸ್ಸುರ್ (ಕೇರಳ):ಕೇರಳದ ದಿ. ಸಿಸ್ಟರ್ ಮಾರಿಯಂ ಥ್ರೆಸಿಯಾ ಅವರಿಗೆ ಕ್ಯಾಥೊಲಿಕ್ ಕ್ರಿಶ್ಚಿಯನ್ನರ ಧರ್ಮಗುರು ಪೋಪ್ ಫ್ರಾನ್ಸಿಸ್ ಸಂತ ಪದವಿಯನ್ನು ಘೋಷಣೆ ಮಾಡಿದ್ದಾರೆ. ರೋಮ್ನ ವ್ಯಾಟಿಕನ್ ಸಿಟಿಯಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಈ ಗೌರವ ನೀಡಲಾಗಿದೆ.
ಥ್ರೆಸಿಯಾ ಅವರು ಕ್ರೈಸ್ತ ಸಮುದಾಯ ಮತ್ತು ಜನರ ಒಳಿತಿಗಾಗಿ ಸೇವೆ ಸಲ್ಲಿಸಿದ್ದರು. 1914ರಲ್ಲಿ ಕೇರಳದ ಪುಥೆಂಚಿರಾದಲ್ಲಿ ಜನಿಸಿದ್ದ ಇವರು, 1926ರ ಜೂನ್ 8ರಂದು, ತಮ್ಮ 50 ವರ್ಷ ವಯಸ್ಸಿನಲ್ಲಿ ನಿಧನರಾಗಿದ್ದರು. ಇನ್ನು, ಈ ಪದವಿ ಪಡೆದ ಕೇರಳದ ನಾಲ್ಕನೇ ವ್ಯಕ್ತಿ ಇವರಾಗಿದ್ದಾರೆ. ಇದಕ್ಕೂ ಮುನ್ನ ಸೇಂಟ್ ಅಲ್ಫೊನ್ಸ್, ಸೇಂಟ್ ಕುರಿಯಾಕೋಸ್ ಎಲಿಯಾಸ್ ಚವಾರ ಮತ್ತು ಸೇಂಟ್ ಯುಪ್ರೇಶಿಯಾ ಅವರಿಗೆ ಈ ಗೌರವ ಸಂದಿತ್ತು.