ಚಿತ್ತೂರ್(ಆಂಧ್ರ ಪ್ರದೇಶ):ಹೃದಯಾಘಾತದಿಂದ ತಮ್ಮ ಸಾವನ್ನಪ್ಪಿರುವ ಸುದ್ದಿ ಕೇಳಿ ಸಹೋದರಿ ಕೂಡ ಜೀವ ಬಿಟ್ಟಿರುವ ಘಟನೆ ಆಂಧ್ರ ಪ್ರದೇಶದ ಚಿತ್ತೂರ್ನಲ್ಲಿ ನಡೆದಿದೆ.
ತಮ್ಮನ ಸಾವಿನ ಸುದ್ದಿ ಕೇಳಿ ಅಕ್ಕ ಸಾವು... ಒಟ್ಟಿಗೆ ನಡೀತು ಅಂತ್ಯಕ್ರಿಯೆ! - ತಮ್ಮನ ಸಾವಿನಿಂದ ಅಕ್ಕ ಸಾವು
ಕೋರ್ಟ್ನಲ್ಲಿ ಕೆಲಸ ಮಾಡುತ್ತಿದ್ದ ತಮ್ಮನ ಸಾವಿನ ಸುದ್ದಿ ಕೇಳಿರುವ ಸಹೋದರಿ ಕೂಡ ಹೃದಯಾಘಾತದಿಂದ ಇಹಲೋಕ ತ್ಯಜಿಸಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.

ತಮ್ಮನ ಸಾವಿನ ಸುದ್ದಿ ಕೇಳಿ ಅಕ್ಕನ ಸಾವು
ಕೋರ್ಟ್ನಲ್ಲಿ ಕೆಲಸ ಮಾಡುತ್ತಿದ್ದ 52 ವರ್ಷದ ಆತಿಕ್ ಅಹ್ಮದ್ ಭಾನುವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ತಮ್ಮನ ಸಾವಿನ ಸುದ್ದಿ ಕೇಳುತ್ತಿದ್ದಂತೆ 56 ವರ್ಷದ ಸಹೋದರಿ ಸಬೀನಾ ಬೇಗಂ ಕೂಡ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾಳೆ.
ಇಬ್ಬರ ಅಂತ್ಯಕ್ರಿಯೆ ಒಟ್ಟಿಗೆ ನಡೆಸಲಾಗಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.