ಕರ್ನಾಟಕ

karnataka

ETV Bharat / bharat

'ಅಮಂಗಳ'ವಾರ: ಭೀಕರ ಅಪಫಾತದಲ್ಲಿ 3 ಮಕ್ಕಳು ಸೇರಿ ಐವರ ದುರ್ಮರಣ - ಸಿರೋಹಿಯಲ್ಲಿ ಕಾರು ಅಪಘಾತ

ಸಿರೋಹಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ವೇಳೆ ಚಾಲಕನಿಗೆ ನಿದ್ರೆಯ ಮಂಪರು ಆವರಿಸಿದ ಕಾರಣದಿಂದ ಈ ಅಪಘಾತ ಸಂಭವಿಸಿದೆ.

ಭೀಕರ ಅಪಫಾತ

By

Published : Nov 5, 2019, 9:14 AM IST

Updated : Nov 5, 2019, 9:41 AM IST

ಸಿರೋಹಿ(ರಾಜಸ್ಥಾನ):ಮಂಗಳವಾರ ಬೆಳ್ಳಂಬೆಳಗ್ಗೆ ಸಿರೋಹಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಮತ್ತು ಟ್ರಕ್​ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮಕ್ಕಳು ಸೇರಿದಂತೆ ಐವರು ದುರ್ಮರಣಕ್ಕೀಡಾಗಿದ್ದಾರೆ.

ನಿಯಂತ್ರಣ ತಪ್ಪಿ ಬಂದ ಕಾರು ನಿಂತಿದ್ದ ಟ್ರಕ್​ ಹಿಂಭಾಗಕ್ಕೆ ಗುದ್ದಿದ ಪರಿಣಾಮ ಈ ಅವಘಡ ನಡೆದಿದೆ. ಸದ್ಯದ ಮಾಹಿತಿ ಪ್ರಕಾರ ಕಾರಿನಲ್ಲಿದ್ದವರೆಲ್ಲರೂ ಗುಜರಾತ್ ಮೂಲದವರು ಎಂದು ತಿಳಿದು ಬಂದಿದೆ. ಸಿರೋಹಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ವೇಳೆ ಚಾಲಕನಿಗೆ ನಿದ್ರೆಯ ಮಂಪರು ಆವರಿಸಿದ ಕಾರಣದಿಂದ ಈ ಅಪಘಾತ ಸಂಭವಿಸಿದೆ.

ಭೀಕರ ಅಪಫಾತದಲ್ಲಿ 3 ಮಕ್ಕಳು ಸೇರಿ ಐವರ ದುರ್ಮರಣ

ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ರೋಹಿಡಾ ಪೊಲೀಸರು ಸ್ಥಳಕ್ಕಾಗಿಮಿಸಿದ್ದಾರೆ. ಘಟನೆಯಲ್ಲಿ ಹತ್ತು ಮಂದಿಗೆ ಗಾಯವಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Last Updated : Nov 5, 2019, 9:41 AM IST

ABOUT THE AUTHOR

...view details