ವಾರಣಾಸಿ(ಉತ್ತರ ಪ್ರದೇಶ):ಭಾರತೀಯ ರೈಲ್ವೆ ತನ್ನ ನಿಲ್ದಾಣ ಹಾಗೂ ರೈಲುಗಳಲ್ಲಿ ಏಕ-ಬಳಕೆಯ ಪ್ಲಾಸ್ಟಿಕ್‌ನಿಂದ ಮುಕ್ತವಾಗಿಡಲು ಕ್ರಮಗಳನ್ನು ತೆಗೆದುಕೊಳ್ಳಲು ನಿರ್ಧರಿಸಿರುವ ಬೆನ್ನಲ್ಲೇ, ಉತ್ತರ ಪ್ರದೇಶದ ವಾರಣಾಸಿ ರೈಲ್ವೆ ನಿಲ್ದಾಣವು ಅಲ್ಲಿನ ವ್ಯಾಪಾರಿಗಳಿಗೆ ಪ್ಲಾಸ್ಟಿಕ್ ಬದಲಿಗೆ ಟೆರಾಕೋಟಾ ನಿರ್ಮಿತ ಕಪ್ ಹಾಗೂ ಪ್ಲೇಟ್ಗಳನ್ನು ಬಳಸುವಂತೆ ಸೂಚಿಸಿದೆ.
ಈ ರೀತಿಯಾಗಿ ಮಣ್ಣಿನಿಂದ ತಯಾರಿಸಿದ ಕಪ್- ಪ್ಲೇಟ್ಗಳನ್ನು ಬಳಸುವುದರಿಂದ ಪ್ಲಾಸ್ಟಿಕ್ ಬಳಕೆ ನಿಲ್ಲಿಸುವುದರ ಜೊತೆಗೆ ಕುಂಬಾರಿಕೆ ಮಾಡುವವರಿಗೆ ಹಣ ಗಳಿಸಲು ಒಂದು ಅವಕಾಶ ಮತ್ತು ಉದ್ಯೋಗ ದೊರೆತಂತಾಗುತ್ತದೆ ಎಂಬುದು ರೈಲ್ವೆ ಅಧಿಕಾರಿಗಳ ಅಭಿಪ್ರಾಯವಾಗಿದೆ.
ಇನ್ನು, ಐಆರ್‌ಸಿಟಿಸಿ-ಚಾಲಿತ ಮಾತ್ರವಲ್ಲದೇ ಖಾಸಗಿ ಪಾನೀಯ ಮಳಿಗೆಗಳೂ ಸಹ ಈಗಾಗಲೇ ಮಣ್ಣಿನ ಕಪ್‌ಗಳಲ್ಲಿ ಚಹಾ ಮತ್ತು ಕಾಫಿಯನ್ನು ನೀಡಲು ಪ್ರಾರಂಭಿಸಿವೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸ್ವಚ್ಛ ಭಾರತ ಮಿಷನ್ನಡಿ ದೇಶದ ಜನತೆ ಪರಿಸರದ ಸಂರಕ್ಷಣೆ ಮಾಡೋ ನಿಟ್ಟಿನಲ್ಲಿ ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಇದೀಗ ವಾರಣಾಸಿ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಅಧಿಕಾರಿಗಳು ಆವರಣವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ಸಜ್ಜಾಗಿದ್ದಾರೆ.
ಏಕ-ಬಳಕೆಯ ಪ್ಲಾಸ್ಟಿಕ್ ಬ್ಯಾನ್ ಮಾಡಿದ ವಾರಣಾಸಿಯ ರೈಲ್ವೆ ಅಧಿಕಾರಿಗಳು ನೀರಿನಂತಹ ಕೆಲವೇ ಪದಾರ್ಥಗಳನ್ನು ನೀಡಲು ಪ್ಲಾಸ್ಟಿಕ್ ಬಳಸಲಾಗುತ್ತದೆ. ಉಳಿದಂತೆ ಬೇರೆ ವಸ್ತುಗಳನ್ನು ಕಾಗದ ಅಥವಾ ಬಟ್ಟೆ ಚೀಲಗಳಲ್ಲಿ ಮಳಿಗೆಗಳು ನೀಡುತ್ತಿವೆ ಎಂದು ಪ್ರಯಾಣಿಕರು ಸಹ ಹೇಳುತ್ತಿದ್ದಾರೆ.
2019ರ ಅಕ್ಟೋಬರ್ 2 ರಿಂದ 50 ಮೈಕ್ರಾನ್‌ಗಿಂತ ಕಡಿಮೆ ಇರುವ ಏಕ-ಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ರೈಲ್ವೆ ಸಚಿವಾಲಯ ನಿಷೇಧಿಸಿ ಆದೇಶ ಹೊರಡಿಸಿತ್ತು. ಇದೀಗ ವಾರಣಾಸಿ ರೈಲ್ವೆ ನಿಲ್ದಾಣದ ಅಧಿಕಾರಿಗಳು ತಮ್ಮ ಆವರಣ ಹಾಗೂ ರೈಲುಗಳಲ್ಲಿ ಏಕ-ಬಳಕೆಯ ಪ್ಲಾಸ್ಟಿಕ್ ಬಳಕೆ ಮಾಡದಂತೆ ಕಾರ್ಯನಿರ್ವಹಿಸುತ್ತಿರುವುದು ಉತ್ತಮ ಹೆಜ್ಜೆಯಾಗಿದೆ.