ಕರ್ನಾಟಕ

karnataka

ETV Bharat / bharat

ದೇಶದಲ್ಲಿ 12 ಲಕ್ಷದತ್ತ ಕೊರೊನಾ ನಾಗಾಲೋಟ... ಒಂದೇ ದಿನ 37,724 ಹೊಸ ಕೇಸ್ ಪತ್ತೆ!

ದೇಶದ ಒಟ್ಟು ಪ್ರಕರಣಗಳಲ್ಲಿ ಸದ್ಯ 4,11,133 ಸಕ್ರಿಯ ಪ್ರಕರಣಗಳಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ. ಉಳಿದಂತೆ 7,53,050 ಜನರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್​ ಆಗಿದ್ದಾರೆ. ಇನ್ನೊಂದೆಡೆ ದೇಶದಲ್ಲಿ ಈವರೆಗೆ 28,732 ಕೊರೊನಾ ಸಾವುಗಳು ಸಂಭವಿಸಿವೆ.

COVID-19
ಭಾರತ ಕೊರೊನಾ

By

Published : Jul 22, 2020, 3:47 PM IST

ನವದೆಹಲಿ: ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 37,724 ಹೊಸ ಕೋವಿಡ್​ ಪ್ರಕರಣಗಳು ವರದಿಯಾಗಿ 648 ಸಾವನ್ನಪ್ಪಿದ್ದಾರೆ. ಈ ಮೂಲಕ ಭಾರತದ ಒಟ್ಟು ಕೋವಿಡ್​-19 ಪ್ರಕರಣಗಳು 11,92,915ಕ್ಕೆ ಏರಿಕೆಯಾಗಿವೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ, ದೇಶದ ಒಟ್ಟು ಪ್ರಕರಣಗಳಲ್ಲಿ ಸದ್ಯ 4,11,133 ಸಕ್ರಿಯ ಪ್ರಕರಣಗಳಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ. ಉಳಿದಂತೆ 7,53,050 ಜನರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್​ ಆಗಿದ್ದಾರೆ. ಇನ್ನೊಂದೆಡೆ ದೇಶದಲ್ಲಿ ಈವರೆಗೆ 28,732 ಕೊರೊನಾ ಸಾವುಗಳು ಸಂಭವಿಸಿವೆ.

3,27,031 ಪ್ರಕರಣ ಮತ್ತು 12,276 ಸಾವುಗಳೊಂದಿಗೆ ಮಹಾರಾಷ್ಟ್ರವು ದೇಶದಲ್ಲೇ ಅತಿ ಹೆಚ್ಚು ಕೊರೊನಾ ಬಾಧೆಗೊಳಗಾದ ರಾಜ್ಯವಾಗಿದೆ. ನೆರೆಯ ರಾಜ್ಯವಾದ ತಮಿಳುನಾಡಿನಲ್ಲಿ ಇದುವರೆಗೆ 1,80,643 ಕೋವಿಡ್​ -19 ಪ್ರಕರಣಗಳು ವರದಿಯಾಗಿದ್ದರೆ, ದೆಹಲಿಯಲ್ಲಿ 1,25,096 ಪ್ರಕರಣಗಳು ವರದಿಯಾಗಿವೆ.

ಆಂಧ್ರಪ್ರದೇಶದಲ್ಲಿ 58,668 ಪ್ರಕರಣಗಳು, ಕರ್ನಾಟಕದಲ್ಲಿ 71,069 ಪ್ರಕರಣಗಳು ಮತ್ತು ತೆಲಂಗಾಣದಲ್ಲಿ ಈವರೆಗೆ 47,705 ಕೊರೊನಾ ಪ್ರಕರಣಗಳು ದಾಖಲಾಗಿವೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ನೀಡಿದ ಮಾಹಿತಿಯ ಪ್ರಕಾರ, ಜುಲೈ 21ರವರೆಗೆ ಭಾರತದಲ್ಲಿ ಒಟ್ಟು 1,47,24,546 ಸ್ಯಾಂಪಲ್​ಗಳನ್ನು ಪರೀಕ್ಷಿಸಿಲಾಗಿದೆ. ನಿನ್ನೆ ಒಂದೇ ದಿನ 3,43,243 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಐಸಿಎಂಆರ್​ ತಿಳಿಸಿದೆ.

ABOUT THE AUTHOR

...view details