ಕರ್ನಾಟಕ

karnataka

ETV Bharat / bharat

ಎಸ್​​ಪಿಬಿ ಆರೋಗ್ಯ ಸ್ಥಿತಿ ಗಂಭೀರ, ಗುಣಮುಖರಾಗಲೆಂದು ಎಲ್ಲರೂ ಪ್ರಾರ್ಥಿಸೋಣ: ಕಮಲ್ ಹಾಸನ್ - ಎಸ್‌ಪಿಬಿ

ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬುದನ್ನು ತಿಳಿಯುತ್ತಲ್ಲೇ ಆಸ್ಪತ್ರೆಗೆ ಭೇಟಿ ನೀಡಿದ ನಟ ಕಮಲ್ ಹಾಸನ್ ಅವರು, ಎಸ್​​ಪಿಬಿಯ ಆರೋಗ್ಯ ವಿಚಾರಿಸಿದರು. ಬಳಿಕ 'ಲೈಫ್ ಸಪೋರ್ಟ್ ಮೆಷಿನ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ತುಂಬಾ ಚೆನ್ನಾಗಿ ಇದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಅವರು ತುಂಬಾ ಗಂಭೀರ ಸ್ಥಿತಿಯಲ್ಲಿ ಇದ್ದಾರೆ. ಅವರು ಬೇಗ ಗುಣಮುಖರಾಗಲಿ ಎಂದು ಎಲ್ಲರೂ ಪಾರ್ಥನೆ ಮಾಡೋಣ' ಎಂದರು.

Haasan
ಕಮಲ್ ಹಾಸನ್

By

Published : Sep 25, 2020, 5:35 AM IST

Updated : Sep 25, 2020, 9:09 AM IST

ಚೆನ್ನೈ: ಹಿರಿಯ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯವರು ಹೇಳಿಕೆ ನೀಡಿದ ಬೆನ್ನಲ್ಲೇ, ನಟ/ ರಾಜಕಾರಣಿ ಕಮಲ್ ಹಾಸನ್ ಅವರು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ಭೇಟಿ ನೀಡಿ ಎಸ್​​ಪಿಬಿಯವರ ಆರೋಗ್ಯ ವಿಚಾರಿಸಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಲೈಫ್ ಸಪೋರ್ಟ್ ಮೆಷಿನ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ತುಂಬಾ ಚೆನ್ನಾಗಿ ಇದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಅವರು ತುಂಬಾ ಗಂಭೀರ ಸ್ಥಿತಿಯಲ್ಲಿ ಇದ್ದಾರೆ. ಅವರು ಬೇಗ ಗುಣಮುಖರಾಗಲಿ ಎಂದು ಎಲ್ಲರೂ ಪಾರ್ಥನೆ ಮಾಡೋಣ' ಎಂದರು.

ಕೊರೊನಾ ವೈರಸ್ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಕಳೆದ ಆಗಸ್ಟ್ 5ರಂದು ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದ ಎಸ್ ಪಿ ಬಾಲಸುಬ್ರಮಣ್ಯಂ ಅವರು ಇಸಿಎಂಒ ಮತ್ತು ಲೈಫ್ ಸಪೋರ್ಟ್​​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎಂಜಿಎಂ ಆಸ್ಪತ್ರೆಗೆ ಭೇಟಿ ನೀಡಿದ ಕಮಲ್ ಹಾಸನ್

ಆಗಸ್ಟ್​ 5ರಂದು ಫೋಸ್ಟ್​ಬುಕ್​ ಪೋಸ್ಟ್​ ಮಾಡಿದ ಎಸ್​ಪಿಬಿ, ಯಾರೂ ನನ್ನ ಬಗ್ಗೆ ಚಿಂತಿಸಬೇಕಾಗಿಲ್ಲ ಮತ್ತು ನಾನು ಹೇಗಿದ್ದೇನೆಂದು ತಿಳಿಯಲು ದಯವಿಟ್ಟು ನನಗೆ ಕರೆ ಮಾಡಬೇಡಿ. ಶೀತ ಮತ್ತು ಜ್ವರವನ್ನು ಹೊರತುಪಡಿಸಿ ನಾನು ಸಂಪೂರ್ಣವಾಗಿ ಗುಣಮುಖವಾಗಿದ್ದೇನೆ. ಜ್ವರ ಕಡಿಮೆಯಾಗಿದೆ. ಎರಡು ದಿನಗಳಲ್ಲಿ ನಾನು ಡಿಸ್ಚಾರ್ಜ್ ಆಗುತ್ತೇನೆ ಮತ್ತು ನಾನು ಮನೆಗೆ ಬರುತ್ತೇನೆ ವಿಡಿಯೋದಲ್ಲಿ ಹೇಳಿದ್ದರು.

Last Updated : Sep 25, 2020, 9:09 AM IST

ABOUT THE AUTHOR

...view details