ಸೀತಾಮರ್ಹಿ(ಬಿಹಾರ):ಬಿಹಾರ ರಾಜ್ಯದ ಸೀತಾಮರ್ಹಿ ಜಿಲ್ಲೆಯ ಸುರಸಂದ್ ನಗರ ಪಂಚಾಯತ್ ವ್ಯಾಪ್ತಿಯ ಜನ ಬೆಳಗ್ಗೆ ಏಳುತ್ತಲೇ ಅಚ್ಚರಿಗೆ ಒಳಗಾಗಿದ್ದರು. ಕಾರಣ ಬೆಳ್ಳಿ ಮಳೆ..!
ಹೌದು, ಸೀತಾಮರ್ಹಿ ಜಿಲ್ಲೆಯಲ್ಲಿ ಇಂದು ಬೆಳ್ಳಿ ಮಳೆ ಭಾರಿ ಸುದ್ದಿ ಮಾಡಿತ್ತು. ರಸ್ತೆಯಲ್ಲಿ ಬಿದ್ದಿದ್ದ ವಿವಿಧ ಗಾತ್ರದ ಬೆಳ್ಳಿಯ ಚೂರನ್ನು ಹೆಕ್ಕಲು ಜನ ಮುಗಿಬಿದ್ದಿದ್ದರು.
ದಿಢೀರ್ ಸುರಿದ ಬೆಳ್ಳಿಯ ಮಳೆಗೆ ಜನತೆ ಅಚ್ಚರಿ ಬೆಳ್ಳಿಯ ಚೂರನ್ನು ಪಾತ್ರಗಳಲ್ಲಿ, ವಸ್ತ್ರದಲ್ಲಿ ತುಂಬಿಸಿ ಮನೆಗಳಿಗೆ ಕೊಂಡೊಯ್ದಿದ್ದಾರೆ. ಏಕಾಏಕಿ ಕಾಣಿಸಿಕೊಂಡ ಬೆಳ್ಳಿ ಮಳೆಯ ಹಿಂದೆ ಬೇರೆಯದೇ ಕಾರಣ ಇದೆ ಎನ್ನುತ್ತಾರೆ ಪೊಲೀಸರು.
ಗ್ರಾಮಸ್ಥರು ಸಂಗ್ರಹಿಸಿದ ಬೆಳ್ಳಿಯ ಚೂರುಗಳು ಸುರಸಂದ್ ವ್ಯಾಪ್ತಿಯಲ್ಲಿ ಬೆಳ್ಳಿ ಕಳ್ಳಸಾಗಣೆ ಹೆಚ್ಚಾಗಿ ಕಂಡುಬರುತ್ತಿದೆ. ನೇಪಾಳದಿಂದ ಬೆಳ್ಳಿ ಮತ್ತು ಚಿನ್ನವನ್ನು ಅಕ್ರಮವಾಗಿ ಭಾರತಕ್ಕೆ ತಂದು ಮಾರಾಟ ಮಾಡಲಾಗುತ್ತಿದೆ. ಈ ಸಾಗಾಟದ ವೇಳೆ ಬೆಳ್ಳಿ ಚೆಲ್ಲಿರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.