ಲಾಕ್ಡೌನ್ನಿಂದಾಗಿ ಬರೀ ಸಮಸ್ಯೆಗಳೇ ಸೃಷ್ಟಿಯಾಗಿವೆ ಎಂದು ಕೊಂಡಿದ್ದರೆ ನಿಮ್ಮ ಗ್ರಹಿಕೆ ತಪ್ಪು. ಅದರಿಂದ ಅನೇಕ ಉತ್ತಮ ಪರಿಣಾಮಗಳೂ ಉಂಟಾಗಿವೆ ಎಂಬುದು ಸತ್ಯ.
ಲಾಕ್ಡೌನ್ ಪಾಸಿಟಿವ್ ಎಫೆಕ್ಟ್; ಶುಭ್ರ ಆಕಾಶ - ಮಾಲಿನ್ಯ ಇಳಿಕೆ
ಲಾಕ್ಡೌನ್ನಿಂದ ಕೆಲ ಒಳ್ಳೆಯ ಪರಿಣಾಮಗಳೂ ಆಗಿವೆ. ಅದರಲ್ಲಿ ಮುಖ್ಯವಾದದು ವಾಯುಮಾಲಿನ್ಯ ಕಡಿಮೆಯಾಗಿರುವುದು. ದೇಶದ ಎಲ್ಲ ಮಹಾನಗರಗಳ ಪರಿಸರದಲ್ಲಿ ಗಮನಾರ್ಹ ಬದಲಾವಣೆ ಕಂಡು ಬಂದಿರುವುದು ಲಾಕ್ಡೌನ್ನ ಪಾಸಿಟಿವ್ ಎಫೆಕ್ಟ್ ಎನ್ನಬಹುದು.
ಲಾಕ್ಡೌನ್ನಿಂದಾಗಿ ದೇಶದ ಬಹುತೇಕ ಮಹಾನಗರಗಳಲ್ಲಿನ ಮಾಲಿನ್ಯದ ಮಟ್ಟ ಗಣನೀಯ ಇಳಿಕೆಯಾಗಿದ್ದು, ಈಗ ಅಲ್ಲೆಲ್ಲ ಆಕಾಶ ಶುಭ್ರವಾಗಿ ಕಾಣುತ್ತಿದೆ. ಲಕ್ಷಾಂತರ ವಾಹನಗಳ ಸಂಚಾರ ನಿಂತಿದ್ದರಿಂದ ಮಹಾನಗರಗಳ ಪರಿಸರ ಒಂದು ರೀತಿಯ ಹಿತಾನುಭವ ನೀಡುತ್ತಿದೆ.
'21 ದಿನಗಳ ಲಾಕ್ಡೌನ್ ಮುಂದುವರೆದಂತೆ ಮಹಾನಗರಗಳ ಮಾಲಿನ್ಯ ಮಟ್ಟ ಇನ್ನೂ ಕಡಿಮೆಯಾಗಲಿದೆ. ಗಾಳಿಯನ್ನು ಪ್ರದೂಷಿತಗೊಳಿಸುವ ಹಾಗೂ ಬಿಸಿ ಅನಿಲಗಳ ಬಿಡುಗಡೆ ಬಹಳಷ್ಟು ಕಡಿಮೆಯಾಗಿದೆ. ಮುಂಬೈನ ಮಾಲಿನ್ಯ ಮಟ್ಟ ಏರ್ ಕ್ವಾಲಿಟಿ ಇಂಡೆಕ್ಸ್ ಮಾಪನದ ಪ್ರಕಾರ ಈಗ 95 ರಷ್ಟಿದೆ. ಸಾಮಾನ್ಯ ದಿನಗಳಲ್ಲಿ ಇದು 76 ರಷ್ಟು ಇರುತ್ತಿತ್ತು. ಹೊಗೆ ಮಿಶ್ರಿತ ಗಾಳಿ 'ಸ್ಮಾಗ್' ಸಂಪೂರ್ಣ ಮಾಯವಾಗಿದ್ದು, ಈಗ ಸಹಜವಾಗಿ ಉಸಿರಾಡಬಹುದಾಗಿದೆ ಎಂದು ಜನ ಹೇಳುತ್ತಿದ್ದಾರೆ.' ಎಂದು ಭಾರತೀಯ ಹವಾಮಾನ ಇಲಾಖೆ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥ ಕುಲದೀಪ ಶ್ರೀವಾಸ್ತವ ಹೇಳಿದ್ದಾರೆ.