ಪುಣೆ: ಜಮ್ಮು ಮತ್ತು ಕಾಶ್ಮೀರದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ದೂರವಾಣಿ ಮತ್ತು ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.
ಸಂಪರ್ಕ ಕಳೆದುಕೊಂಡ ಕಾಶ್ಮೀರಿ ಯುವತಿಯರು; ನೆರವಿಗೆ ಧಾವಿಸಿದ ಸಿಖ್ ಗುರುದ್ವಾರ ಸಮಿತಿ - Sikh Gurdwara Committee helps Kashmiri youths
ಜಮ್ಮು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನ ರದ್ದತಿ ಬಳಿಕ ಕಾಶ್ಮೀರ ಬಿಟ್ಟು ಬೇರೆಡೆ ವಾಸಿಸುತ್ತಿರುವ ಜನರು ತೊಂದರೆಗೊಳಗಾಗಿದ್ದರು.
ನೆರವಿಗೆ ಬಂತು ಸಿಖ್ ಗುರುದ್ವಾರ ಸಮಿತಿ
ಪುಣೆಯಲ್ಲಿ ವಿದ್ಯಾಭ್ಯಾಸಕ್ಕೆ ಬಂದಿದ್ದ 32 ಕಾಶ್ಮೀರಿ ಯುವತಿಯರು ತಮ್ಮ ಕುಟುಂಬದೊಂದಿಗೆ ಸಂಪರ್ಕವನ್ನೇ ಕಳೆದುಕೊಂಡು ಭಯಭೀತರಾಗಿದ್ದರು. ಇವರೆಲ್ಲರೂ ಸ್ಥಳೀಯ ಪಿಜಿ ಮತ್ತು ಹಾಸ್ಟೆಲ್ಗಳನ್ನು ಇದ್ದುಕೊಂಡು ವ್ಯಾಸಂಗ ಮಾಡುತ್ತಿದ್ದರು. ಮನೆಯವರ ಜೊತೆ ಸಂಪರ್ಕ ಕಳೆದುಕೊಂಡು ಸಂಕಟ ಪಡ್ತಿದ್ದ ಈ ಯುವತಿಯರಿಗೆ ಸ್ಥಳೀಯ ಸಿಖ್ ಗುರುದ್ವಾರ ಸಮಿತಿ ನೆರವು ಒದಗಿಸಿದೆ.
ಸಿಖ್ ಗುರುದ್ವಾರ ಸಮಿತಿಯವರು ಯುವತಿಯರನ್ನು ವಿಮಾನದ ಮೂಲಕ ಶ್ರೀನಗರಕ್ಕೆ ತಾವೇ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ. ಇನ್ನೂ ಯಾರಾದ್ರೂ ತೊಂದರೆಗೆ ಸಿಲುಕಿಕೊಂಡಿದ್ರೆ ಅಂತವರಿಗೂ ಸಹಾಯ ಮಾಡುವುದಾಗಿ ಸಮಿತಿ ಹೇಳಿದೆ.