ಕರ್ನಾಟಕ

karnataka

ETV Bharat / bharat

ದೀಪಿಕಾ ಜೊತೆ ತೆರೆ ಹಂಚಿಕೊಳ್ಳಲು ಉತ್ಸುಕರಾಗಿದ್ದಾರೆ ಸಿದ್ಧಾಂತ್ ಚತುರ್ವೇದಿ - ನಟ ಸಿದ್ಧಾಂತ್ ಚತುರ್ವೇದಿ

ಗಲ್ಲಿ ಬಾಯ್ ಚಿತ್ರದಲ್ಲಿ ಎಂ. ಸಿ. ಶೇರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸಿದ್ಧಾಂತ್ ಚತುರ್ವೇದಿ ಸದ್ಯ ಬಾಲಿವುಡ್ ಶಿಖರ ಏರುತ್ತಿದ್ದಾರೆ. ಅವರು ಬಂಟಿ ಔರ್​ ಬಬ್ಲಿ 2 ಸೇರಿದಂತೆ ದೊಡ್ಡ ದೊಡ್ಡ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಶಕುನ್ ಬಾತ್ರಾ ಅವರ ಇನ್ನೂ ಹೆಸರಿಡದ ಚಿತ್ರವೊಂದರಲ್ಲಿ ದೀಪಿಕಾ ಪಡುಕೋಣೆ ಅವರೊಂದಿಗೆ ಸ್ಕ್ರೀನ್ ಸ್ಪೇಸ್ ಹಂಚಿಕೊಳ್ಳಲಿದ್ದು, ತಮ್ಮ ವೃತ್ತಿಜೀವನದ ಬಗ್ಗೆ ಸಾಕಷ್ಟು ಉತ್ಸುಕರಾಗಿದ್ದಾರೆ.

Siddhant Chaturvedi excited working with Deepika Padukone in next
ದೀಪಿಕಾ ಪಡುಕೋಣೆಯೊಂದಿಗೆ ತೆರೆ ಹಂಚಿಕೊಳ್ಳಲು ಎಕ್ಸೈಟ್​ ಆಗಿದ್ದಾರೆ ಸಿದ್ಧಾಂತ್ ಚತುರ್ವೇದಿ

By

Published : Jun 24, 2020, 3:10 PM IST

ಮುಂಬೈ(ಮಹಾರಾಷ್ಟ್ರ):ಗಲ್ಲಿ ಬಾಯ್ ಚಿತ್ರದಲ್ಲಿ ಎಂ. ಸಿ. ಶೇರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸಿದ್ಧಾಂತ್ ಚತುರ್ವೇದಿ ಸದ್ಯ ಬಾಲಿವುಡ್ ಶಿಖರ ಏರುತ್ತಿದ್ದಾರೆ. ಅವರು ಬಂಟಿ ಔರ್​ ಬಬ್ಲಿ 2 ಸೇರಿದಂತೆ ದೊಡ್ಡ ದೊಡ್ಡ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಕುನ್ ಬಾತ್ರಾ ಅವರ ಇನ್ನೂ ಹೆಸರಿಡದ ಚಿತ್ರವೊಂದರಲ್ಲಿ ದೀಪಿಕಾ ಪಡುಕೋಣೆ ಅವರೊಂದಿಗೆ ಸ್ಕ್ರೀನ್ ಸ್ಪೇಸ್ ಹಂಚಿಕೊಳ್ಳಲಿದ್ದು, ತಮ್ಮ ವೃತ್ತಿಜೀವನ ಕುರಿತು ಸಾಕಷ್ಟು ಉತ್ಸುಕರಾಗಿದ್ದಾರೆ.

ತಮ್ಮ ಮುಂಬರುವ ಕೆಲಸದ ಬಗ್ಗೆ ಸಿದ್ಧಾಂತ್​ ಏನ್​ ಹೇಳ್ತಾರೆ ಗೊತ್ತಾ? "ಬಂಟಿ ಔರ್​ ಬಬ್ಲಿ 2 ಚಿತ್ರದಲ್ಲಿ ನಟಿಸಲು ನಾನು ತುಂಬಾ ಉತ್ಸುಕನಾಗಿದ್ದೇನೆ. ಮತ್ತು ಅದನ್ನು ವೀಕ್ಷಿಸುವ ಜನರ ಪ್ರತಿಕ್ರಿಯೆಗೆ ಕಾತುರನಾಗಿ ಕಾಯುತ್ತಿದ್ದೇನೆ. ಇನ್ನೇನು ಚಿತ್ರ ಬಿಡುಗಡೆಯಾಗುವಷ್ಟರಲ್ಲಿ ಕೊರೊನಾ ಸಾಂಕ್ರಾಮಿಕದ ಬಿಕ್ಕಟ್ಟಿನ ವಾತಾವರಣವೂ ಕೂಡ ಸರಿಯಾಗಲಿದೆ ಎಂದು ನಾನು ಭಾವಿಸುತ್ತೇನೆ. ಇದು ಫ್ಯಾಮಿಲಿ ಎಂಟರ್​​​ಟ್ರೈನರ್​​​ ಸಿನಿಮಾ ಆಗಿದೆ" ಎನ್ನುತ್ತಾರೆ.

ಶಕುನ್ ಬಾತ್ರಾ ಅವರ ಮುಂದಿನ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮತ್ತು ಅನನ್ಯಾ ಪಾಂಡೆ ಅವರೊಂದಿಗೆ ಕೆಲಸ ಮಾಡಲಿರುವ ಸಿದ್ಧಾಂತ್, ದೀಪಿಕಾ ಪಡುಕೋಣೆಯೊಂದಿಗೆ ಜಸ್ಟ್​ ಮಾತನಾಡುವುದೇ ಅದೆಷ್ಟೊ ಹುಡುಗರ ಕನಸಾಗಿರುತ್ತದೆ. ಆದರೆ, ನನಗೆ ಅವರೊಂದಿಗೆ ನಟಿಸುವ ಅವಕಾಶ ಸಿಕ್ಕಿದೆ. ಅದಕ್ಕಾಗಿ ನಾನು ಎದುರುನೋಡುತ್ತಿದ್ದೇನೆ. ಇದೊಂದು ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಇದರ ಜಾನರ್​ ಕೊಂಚ ಭಿನ್ನವಾಗಿದೆ ಎಂದು ಹೇಳಿದರು

ABOUT THE AUTHOR

...view details