ಕರ್ನಾಟಕ

karnataka

ETV Bharat / bharat

ದೇಶದ ಮೊದಲ ಮತದಾರ ಇವರು.. ಈವರೆಗೂ ಒಂದ್ಸಾರಿನೂ ಮಿಸ್ಸೇ ಇಲ್ಲ! - undefined

102 ವರ್ಷದ ಶಾಮ್ ಸರಣ್ ನೇಗಿ ಶತಾಯುಷಿ. ಸ್ವಾತಂತ್ರ್ಯ ಬಳಿಕ ಮೊದಲ ಬಾರಿ ಹಕ್ಕು ಚಲಾಯಿಸಿದ್ದ ಮತದಾರ. ಮೊದಲು ದೇಶದಲ್ಲಿ ಯಾರೊಬ್ಬರೂ ತಮ್ಮ ಹಕ್ಕು ಚಲಾಯಿಸಿರಲಿಲ್ಲ. ಹಿಮಾಚಲಪ್ರದೇಶದ ಕಿನ್ನೌರ್‌ ಜಿಲ್ಲೆಯ ಕಲ್ಪಾ ಎಂಬ ಹಳ್ಳಿಯಲ್ಲಿ ಅಜ್ಜ ಬದುಕಿದ್ದಾರೆ.

ಶಾಮ್ ಸರಣ್

By

Published : Mar 30, 2019, 3:29 PM IST

ಕಿನ್ನೌರ್‌,(ಹಿಮಾಚಲಪ್ರದೇಶ): ಮತದಾನ.. ಪ್ರತಿ ಪ್ರಜೆಗೂ ಸಂವಿಧಾನ ಕೊಟ್ಟ ಮಹತ್ತರ ಅಸ್ತ್ರ. ಆದರೆ, ವಿದ್ಯಾವಂತರಿರುವ ನಗರಗಳಲ್ಲೇ ಅತೀ ಕಡಿಮೆ ವೋಟಿಂಗಾಗಿರುತ್ತೆ. ದೇಶದಲ್ಲಿ ಮೊದಲ ಬಾರಿಗೆ ಹಕ್ಕು ಚಲಾಯಿಸಿದ್ದ ಶತಾಯುಷಿ ಈಗಲೂ ಒಂದೇ ಒಂದು ಬಾರಿ ತಪ್ಪಿಸದೇ ಮತದಾನ ಮಾಡ್ತಿದ್ದಾರೆ.

102ರ ಅಜ್ಜನಿಂದ ಮಿಸ್‌ ಮಾಡದೇ ಮತದಾನ:
102 ವರ್ಷದ ಶಾಮ್ ಸರಣ್ ನೇಗಿ ಶತಾಯುಷಿ. ಸ್ವಾತಂತ್ರ್ಯ ಬಳಿಕ ಮೊದಲ ಬಾರಿ ಹಕ್ಕು ಚಲಾಯಿಸಿದ್ದ ಮತದಾರ. ಈ ಅಜ್ಜನಿಗೂ ಮೊದಲು ದೇಶದಲ್ಲಿ ಯಾರೊಬ್ಬರೂ ತಮ್ಮ ಹಕ್ಕು ಚಲಾಯಿಸಿರಲಿಲ್ಲ. ಹಿಮಾಚಲಪ್ರದೇಶದ ಕಿನ್ನೌರ್‌ ಜಿಲ್ಲೆಯ ಕಲ್ಪಾ ಎಂಬ ಹಳ್ಳಿಯಲ್ಲಿ ಅಜ್ಜ ಬದುಕಿದ್ದಾರೆ. 1951ರಿಂದ ಗ್ರಾಪಂ, ವಿಧಾನಸಭೆ ಹಾಗೂ ಲೋಕಸಭೆಗೆ ನಡೆದ ಪ್ರತಿ ಚುನಾವಣೆಯಲ್ಲೂ ಮತದಾನ ಮಾಡಿದ್ದಾರೆ. 'ಪ್ರಜಾಪ್ರಭುತ್ವದ ಆದರ್ಶ ಪಾಲಿಸಲು ಪ್ರತಿಯೊಬ್ಬ ತಮ್ಮ ಹಕ್ಕು ಚಲಾಯಿಸಬೇಕು' ಅಂತಾರೆ ಅಜ್ಜ ನೇಗಿ. ಜುಲೈಗೆ 103ನೇ ವಸಂತಕ್ಕೆ ಕಾಲಿರಿಸಲಿರುವ ಅಜ್ಜ, ಈಗ ಲೋಕಸಭಾ ಚುನಾವಣೆಗೆ ಮತ ಹಾಕಲು ಉತ್ಸುಕರಾಗಿದ್ದಾರೆ.

ಶಾಮ್ ಸರಣ್

ಅಜ್ಜನ ಗುರುತು ಪತ್ತೆ ಹಚ್ಚಿದ್ದ ಐಎಎಸ್‌ ಅಧಿಕಾರಿ :
2007ರವರೆಗೂ ಹಿರಿಯ ಮತದಾರ ಅಂತಾ ಮಾತ್ರ ಗೊತ್ತಿತ್ತು. ಆದರೆ, ಚುನಾವಣಾ ಆಯೋಗ ದೇಶದಲ್ಲಿ ಮೊದಲ ಬಾರಿ ಹಕ್ಕು ಚಲಾಯಿಸಿದ ವ್ಯಕ್ತಿ ಪತ್ತೆ ಹಚ್ಚಲು ಮುಂದಾದಾಗ ನೇಗಿ ಪರಚಯವಾಗಿತ್ತಂತೆ. ಹಿ.ಪ್ರದೇಶದ ಈಗಿನ ಪಿಡಬ್ಲ್ಯೂಡಿ ಹೆಚ್ಚುವರಿ ಕಾರ್ಯದರ್ಶಿ, ಐಎಎಸ್ ಆಫೀಸರ್‌ ಮನಿಷಾ ನಂದಾ, ಆಗ ಮೊದಲ ಬಾರಿಗೆ 90 ವರ್ಷ ಮೇಲ್ಪಟ್ಟವರಿಗೆ ಮತದಾರರ ಗುರುತಿನ ಚೀಟಿ ಮಾಡಿಸಲು ಮುಂದಾಗಿದ್ದರು. ಆಗ ಅಜ್ಜ ನೇಗಿಗೆ 92 ವರ್ಷ. ಮನಿಷಾ ನಂದಾ, ಅಧಿಕಾರಿಗಳನ್ನ ಅಜ್ಜನ ಮನೆಗೆ ಕಳುಹಿಸಿದ್ದರು. ಈತನ ಬಗ್ಗೆ ತಿಳಿಯಲು ಪಿಹೆಚ್‌ಡಿ ರೀತಿ ಸರ್ಕಸ್ ಮಾಡಿದ್ದರಂತೆ ಮನಿಷಾ ನಂದಾ. 4 ತಿಂಗಳು ನವದೆಹಲಿಯ ಕೇಂದ್ರ ಚುನಾವಣಾ ಆಯೋಗದ ಕಚೇರಿಯಲ್ಲೂ ತಡಕಾಡಿದ್ದರೂ ಯಾವುದೇ ಮಾಹಿತಿ ಸಿಕ್ಕಿರಲಿಲ್ವಂತೆ. 2003ರ ಬ್ಯಾಚ್‌ನ ಐಎಎಸ್‌ ಎಂ.ಸುಧಾದೇವಿ ಕಿನ್ನೌರ್‌ ಜಿಲ್ಲಾಧಿಕಾರಿಯಾಗಿ ಬಂದಿದ್ದರು. ಕಲ್ಪಾ ಗ್ರಾಮಕ್ಕೆ ಭೇಟಿಕೊಟ್ಟಾಗ, ಪ್ರತಿಯೊಬ್ಬರಿಗೂ ಅಜ್ಜ ಚಿರಪರಿಚಿತ ಹೆಸರಾಗಿತ್ತಂತೆ.

ಮೊದಲ ಬಾರಿ ಆ ಮತದಾನ ನಡೆದ ಬಗೆ ಹೇಗೆ?
ಭಯಂಕರ ಚಳಿ, ಅತೀ ಹೆಚ್ಚು ಹಿಮಬೀಳುವ ಪ್ರದೇಶ ಕಿನ್ನೌರ್‌. ಚಳಿ ಆರಂಭಕ್ಕೂ ಮೊದಲೇ ಆಗ 1ನೇ ಲೋಕಸಭೆಗೆ ಅಕ್ಟೋಬರ್‌ 25, 1951ರಂದು ಮೊದಲ ಮತದಾನ ನಡೆದಿತ್ತು. 1952ರ ಜನವರಿ-ಫೆಬ್ರವರಿ ತಿಂಗಳಿನಲ್ಲಿ ದೇಶದ ಉಳಿದೆಡೆ ಚುನಾವಣೆ ನಡೆದಿತ್ತು. 1917ರ ಜುಲೈ 1ರಂದು ಹುಟ್ಟಿದ್ದ ನೇಗಿ, ಸರ್ಕಾರಿ ಶಾಲೆ ಶಿಕ್ಷಕರಾಗಿದ್ದವರು. ವಿಶೇಷ ಅಂದ್ರೇ ಮೊದಲ ಚುನಾವಣಾ ಕಾರ್ಯಕ್ಕೆ ಇವರೂ ನಿಯೋಜನೆಗೊಂಡಿದ್ದರು. ಆಗ ಸಂಬಂಧಿಸಿದ ಅಧಿಕಾರಿಗೆ ಮನವಿ ಮಾಡಿ, ಅವಕಾಶ ಪಡೇದು ಮತದಾನ ಕೇಂದ್ರಕ್ಕೆ ತೆರಳಿ ತಮ್ಮ ಹಕ್ಕು ಚಲಾಯಿಸಿದ್ದರಂತೆ. ಅದೇ ದೇಶದಲ್ಲಿ ಮೊದಲ ಬಾರಿ ಚಲಾವಣೆಯಾದ ಮತವಾಗಿತ್ತು. ಈಗಲೂ ಅದನ್ನ ಸ್ಮರಿಸಿಕೊಳ್ತಾರೆ ನೇಗಿಯವರ ಪುತ್ರ 53 ವರ್ಷದ ಚಂದರ್‌ ಪ್ರಕಾಶ್‌.

ಶಾಮ್ ಸರಣ್

ಚುನಾವಣಾ ಆಯೋಗದ ಬ್ರ್ಯಾಂಡ್ ಅಂಬಾಸಿಡರ್ :
ಮತದಾನ ಶಿಕ್ಷಣ ಮತ್ತು ಮತದಾರರ ಪಾಲ್ಗೊಳ್ಳುವಿಕೆಗೆ ಚು. ಆಯೋಗದ ಅಭಿಯಾನಕ್ಕೆ ಶಾಮ್‌ ಸರಣ್ ನೇಗಿ ರಾಯಭಾರಿ ಆಗಿದ್ದರು. 102 ವರ್ಷದ ಅಜ್ಜ ಈಗಲೂ ರೇಡಿಯೊ ಕೇಳ್ತಾರೆ. ಕಣ್ಣು ಇನ್ನೂ ಸ್ಪಷ್ಟವಾಗಿ ಕಾಣುತ್ತವೆ. ಚುನಾವಣಾ ಆಯೋಗದ ವಜ್ರಮಹೋತ್ಸವ ಹಿನ್ನೆಲೆ, 2010ರಲ್ಲಿ ಆಗಿನ ಮುಖ್ಯ ಚುನಾವಣಾಧಿಕಾರಿ ನವಿನ್ ಚಾವ್ಲಾ, ಕಲ್ಪಾ ಗ್ರಾಮಕ್ಕೆ ತೆರಳಿ ನೇಗಿ ಅವರನ್ನ ಸನ್ಮಾನಿಸಿದ್ದರು. 2007, 2012 ಮತ್ತು 2017 ವಿಧಾನಸಭೆ ಹಾಗೂ 2009, 20014ರ ಲೋಕಸಭಾ ಚುನಾವಣೆಯಲ್ಲಿ ಶತಾಯುಷಿ ಅಜ್ಜ ಹಕ್ಕು ಚಲಾಯಿಸಿದ್ದನ್ನ ವಿಡಿಯೋ ಮಾಡಿತ್ತು ಆಯೋಗ. ಅಜ್ಜನ ಕಲ್ಪಾ ಗ್ರಾಮ ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಬರುತ್ತದೆ.

For All Latest Updates

TAGGED:

ABOUT THE AUTHOR

...view details