ಹೈದರಾಬಾದ್: ದಕ್ಷಿಣ ಭಾರತದ ಪ್ರಸಿದ್ಧ ನಟಿ, ಕಮಲ್ ಹಾಸನ್ ಮಗಳು ಶ್ರುತಿ ಹಾಸನ್ ಲಂಡನ್ ಮೂಲದ ಮೈಕೆಲ್ ಕಾರ್ಸೇಲ್ ಜತೆ ಲವ್ ಬ್ರೇಕಪ್ ಮಾಡಿಕೊಂಡಿದ್ದ ಸುದ್ದಿ ಸಿಕ್ಕಾಪಟ್ಟೆ ಹರಡಿತ್ತು. ಈ ಮಧ್ಯೆ ಅವರೇ ಹೇಳಿರುವ ಮಾತು ಇದೀಗ ಅಚ್ಚರಿ ಮೂಡಿಸಿದೆ.
ನಾನು ವಿಸ್ಕಿ ಬಾಟಲಿಗೆ ವ್ಯಸನಿಯಾಗಿದ್ದೆ: ಅಚ್ಚರಿ ಹೇಳಿಕೆ ನೀಡಿದ ಶ್ರುತಿ ಹಾಸನ್ - ವಿಸ್ಕಿ ವ್ಯಸನಿ
ಸರಿ ಸುಮಾರು ಎರಡು ವರ್ಷಗಳ ಕಾಲ ತಾವು ವಿಸ್ಕಿ ವ್ಯಸನಿಯಾಗಿದ್ದೆ ಎಂಬ ವಿಚಾರವನ್ನು ಸೌತ್ ಇಂಡಸ್ಟ್ರಿಯ ಫೇಮಸ್ ನಟಿ ಶ್ರುತಿ ಹಾಸನ್ ಹೊರಹಾಕಿದ್ದಾರೆ.
ಟಾಲಿವುಡ್ ನಟಿ ಲಕ್ಷ್ಮಿ ಮಂಚು ನಡೆಸಿಕೊಂಡುವ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟಿ ಶ್ರುತಿ ಹಾಸನ್, ತಾವು ವಿಸ್ಕಿ ವ್ಯಸನಿಯಾಗಿದ್ದೆ ಎಂಬ ಮಾತು ಹೇಳಿದ್ದಾರೆ. ಎರಡು ವರ್ಷಗಳ ಕಾಲ ಮದ್ಯಪಾನದ ವ್ಯಸನಿಯಾಗಿ ಪ್ರತಿದಿನ ಸಿಕ್ಕಾಪಟ್ಟೆ ಕುಡಿಯುತ್ತಿದೆ. ಹೀಗಾಗಿ ನನ್ನ ಆರೋಗ್ಯ ಹಾಳಾಗಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.
ನನ್ನ ಆರೋಗ್ಯ ಹಾಳಾದ ಬಳಿಕ ಎಲ್ಲವನ್ನು ನಿಲ್ಲಿಸಲು ನಿರ್ಧರಿಸಿದೆ. ಜೊತೆಗೆ ನನ್ನ ಜೀವನದಲ್ಲಿ ಹೊಸ ಬದಲಾವಣೆಯಾಗಿವೆ ಎಂದು ಹೇಳಿದ್ದಾರೆ. ನಾನು ಅನಾರೋಗ್ಯದಿಂದ ಬಳಲುತ್ತಿದ್ದದ್ದು ಯಾರಿಗೂ ತಿಳಿದಿರಲಿಲ್ಲ. ಇದು ನನ್ನ ವೈಯಕ್ತಿಕ ವಿಚಾರವಾದ ಕಾರಣ ನನ್ನ ಸ್ನೇಹಿತರಿಗೂ ಹೇಳಿಲ್ಲ. ಸದ್ಯ ಚಿಕಿತ್ಸೆ ಪಡೆದುಕೊಂಡು ಅನಾರೋಗ್ಯದಿಂದ ಚೇತರಿಸಿಕೊಂಡಿದ್ದೇನೆ. ಚೇತರಿಸಿಕೊಳ್ಳಲು ತುಂಬಾ ಸಮಯ ಬೇಕಾದ ಕಾರಣ ನಾನು ಸಿನಿಮಾಗಳಿಂದ ದೂರವಾದೆ. ಸದ್ಯಕ್ಕೆ ವೃತ್ತಿ ಬದುಕಿನ ಕಡೆಗೆ ದೃಷ್ಟಿ ಹರಿಸಿದ್ದೇನೆ ಎಂದು ಹೇಳಿದ್ದಾರೆ. ಇದೇ ಕಾರ್ಸೇಲ್ ಜತೆ ಲವ್ ಬ್ರೇಕಪ್ ಮಾಡಿಕೊಂಡಿರುವ ವಿಷಯ ಸಹ ಹೊರಹಾಕಿದ್ದಾರೆ.