ಪಣಜಿ (ಗೋವಾ): ಕೋವಿಡ್ಗೆ ಚಿಕಿತ್ಸೆ ಪಡೆಯುತ್ತಿರುವ ಕೇಂದ್ರ ಆಯುಷ್ ಸಚಿವ ಶ್ರೀಪಾದ್ ನಾಯಕ್ ಅವರು ಉತ್ತಮ ಉಸಿರಾಟದಿಂದ ಸ್ಥಿರವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಗೋವಾದ ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೋವಿಡ್ನಿಂದ ಚೇತರಿಸಿಕೊಳ್ಳುತ್ತಿರುವ ಕೇಂದ್ರ ಆಯುಷ್ ಸಚಿವ ಶ್ರೀಪಾದ್ ನಾಯಕ್ - ಶ್ರೀಪಾದ್ ನಾಯಕ್ ಕೋವಿಡ್ನಿಂದ ಚೇತರಿಕೆ
ಆಗಸ್ಟ್ 28ರಂದು ನಡೆಸಿದ ಆರ್‌ಟಿ-ಪಿಸಿಆರ್ ಪರೀಕ್ಷೆಯು ಸಕಾರಾತ್ಮಕವಾಗಿ ಬಂದಿದ್ದು, ಅವರಲ್ಲಿ ಕೋವಿಡ್ ವೈರಸ್ ಪತ್ತೆಯಾಗಿದೆ. ಆದ್ರೆ 48 ಗಂಟೆಗಳ ಬಳಿಕ ಪುನಃ ಪರೀಕ್ಷೆ ನಡೆಸಲಾಗುವುದು ಎಂದು ಆರೋಗ್ಯ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ಆ. 12ರಂದು ಕೋವಿಡ್ ಪಾಸಿಟಿವ್ ಬಂದ ಕಾರಣ ನಾಯಕ್ ಅಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಾಯಕ್ ಅವರು ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಉಸಿರಾಟದ ಕ್ರಮವೂ ಚೇತರಿಸಿಕೊಳ್ಳುತ್ತಿದೆ. ದೇಹದಲ್ಲಿನ ಜೀವಾಣುಗಳು ಸ್ಥಿರವಾಗಿ ಚೇತರಿಕೆ ಕಾಣುತ್ತಿವೆ. ಆಗಸ್ಟ್ 28ರಂದು ನಡೆಸಿದ ಆರ್‌ಟಿ-ಪಿಸಿಆರ್ ಪರೀಕ್ಷೆಯು ಸಕಾರಾತ್ಮಕವಾಗಿ ಬಂದಿದ್ದು, ಅವರಲ್ಲಿ ಕೋವಿಡ್ ವೈರಸ್ ಪತ್ತೆಯಾಗಿದೆ. ಆದ್ರೆ 48 ಗಂಟೆಗಳ ಬಳಿಕ ಪುನಃ ಪರೀಕ್ಷೆ ನಡೆಸಲಾಗುವುದು ಎಂದು ಆರೋಗ್ಯ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ಆದಾಗ್ಯೂ ನಾಯಕ್ ಉತ್ತಮ ಆರೋಗ್ಯ ಸ್ಥಿತಿಯನ್ನು ಸಾಧಿಸುತ್ತಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.