ಕರ್ನಾಟಕ

karnataka

ETV Bharat / bharat

ಇಂದಿನಿಂದ ವೈಷ್ಣೋದೇವಿ ಯಾತ್ರೆ: ಪ್ರತೀ ದಿನ 2 ಸಾವಿರ ಯಾತ್ರಿಕರಿಗಷ್ಟೇ ಅವಕಾಶ - ವೈಷ್ಣೋದೇವಿ ಯಾತ್ರೆ ಆರಂಭ

ಐದು ತಿಂಗಳಿನಿಂದ ಸ್ಥಗಿತಗೊಳಿಸಲಾಗಿದ್ದ ವೈಷ್ಣೋ ದೇವಿ ಯಾತ್ರೆ ಇಂದಿನಿಂದ ಪುನಾರಂಭವಾಗಿದ್ದು ಪ್ರತೀ ದಿನ 2 ಸಾವಿರ ಯಾತ್ರಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

Mata Vaishno Devi Yatra
ವೈಷ್ಣೋದೇವಿ ಯಾತ್ರೆ

By

Published : Aug 16, 2020, 3:31 PM IST

ಉಧಂಪುರ (ಜಮ್ಮು ಕಾಶ್ಮೀರ):ಕೊರೊನಾ ವೈರಸ್ ಬಿಕ್ಕಟ್ಟಿನಿಂದಾಗಿ ಸುಮಾರು ಐದು ತಿಂಗಳಿನಿಂದ ನಿಲ್ಲಿಸಲಾಗಿದ್ದ ವೈಷ್ಣೋದೇವಿ ಯಾತ್ರೆ ಇಂದಿನಿಂದ ಶುರುವಾಗಿದೆ.

ಜಮ್ಮು ಕಾಶ್ಮೀರ ಆಡಳಿತವು ಮಾರ್ಚ್ 18 ರಂದು ಪವಿತ್ರ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಮಾಹಿತಿ ನೀಡಿತ್ತು. ಆದರೆ ಇಂದಿನಿಂದ ಯಾತ್ರೆಯನ್ನು ಆರಂಭಿಸಲಾಗಿದೆ ಎಂದು ಶ್ರೀಮಾತಾ ವೈಷ್ಣೋ ದೇವಿ ದೇಗುಲ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಕುಮಾರ್ ತಿಳಿಸಿದ್ದಾರೆ.

ಮೊದಲ ವಾರದಲ್ಲಿ ಪ್ರತೀ ದಿನ ಎರಡು ಸಾವಿರ ಭಕ್ತರಿಗಷ್ಟೇ ದರ್ಶನಕ್ಕೆ ಅವಕಾಶವಿದೆ. 100 ಯಾತ್ರಾರ್ಥಿಗಳು ಹೊರಗಿನವರು ಮತ್ತು ಉಳಿದ 1,900 ಮಂದಿ ಜಮ್ಮು ಕಾಶ್ಮೀರದವರು. ಒಂದು ವಾರದ ನಂತರ ಯಾತ್ರೆಯ ಕುರಿತು ಮತ್ತೊಮ್ಮೆ ಪರಿಶೀಲನೆ ನಡೆಸಲಾಗುವುದು. ಅದರ ಆಧಾರದ ಮೇಲೆ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ. ಯಾತ್ರಾರ್ಥಿಗಳು ತಮ್ಮ ಫೋನ್‌ನಲ್ಲಿ 'ಆರೋಗ್ಯ ಸೇತು ಆ್ಯಪ್' ಡೌನ್‌ಲೋಡ್ ಮಾಡಿಕೊಳ್ಳಬೇಕಾಗುತ್ತದೆ.

ದೇವಾಲಯದಲ್ಲಿ ಮಾಸ್ಕ್ ಮತ್ತು ಸಾಮಾಜಿಕ ಅಂತರದಂತಹ ನಿಯಮಗಳನ್ನೂ ಸಹ ಅನುಸರಿಸಬೇಕಾಗುತ್ತದೆ. ಎಲ್ಲಾ ಯಾತ್ರಿಕರಿಗೂ ಪ್ರಯಾಣದ ಆರಂಭದ ಹಂತದಲ್ಲಿ ದೇಹದ ಉಷ್ಣತೆಯನ್ನು ಪರಿಶೀಲನೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details