ಕರ್ನಾಟಕ

karnataka

ETV Bharat / bharat

ವೈದ್ಯಕೀಯ ಕಾಲೇಜು ಸ್ಥಾನಗಳಲ್ಲಿ ಒಬಿಸಿ ಹಾಗೂ ದಲಿತ ಮೀಸಲಾತಿ ಜಾರಿಗೆ ತನ್ನಿ: ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್ - ಒಬಿಸಿ ಹಾಗೂ ದಲಿತ ಮೀಸಲಾತಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮತ್ತು ದಲಿತರಿಗೆ ವೈದ್ಯಕೀಯ ಕಾಲೇಜು ಸ್ಥಾನಗಳಲ್ಲಿ ಮೀಸಲಾತಿ ಜಾರಿಗೆ ತರಬೇಕು ಎಂದು ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ.

modi stallin
modi stallin

By

Published : Oct 26, 2020, 5:13 PM IST

ಚೆನ್ನೈ (ತಮಿಳುನಾಡು): ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಮೀಸಲಾತಿ ತೋರಿದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮತ್ತು ದಲಿತರಿಗೆ ವೈದ್ಯಕೀಯ ಕಾಲೇಜು ಸ್ಥಾನಗಳಲ್ಲಿ ಮೀಸಲಾತಿ ಜಾರಿಗೆ ತರಬೇಕು ಎಂದು ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಕೂಡ ಈ ವಿಷಯದಲ್ಲಿ ಮೋದಿಯವರ ಮೇಲೆ ರಾಜಕೀಯ ಒತ್ತಡ ಹೇರಬೇಕು ಎಂದು ಸ್ಟಾಲಿನ್ ಹೇಳಿದ್ದಾರೆ.

ಈ ಶೈಕ್ಷಣಿಕ ವರ್ಷದಿಂದ ಒಬಿಸಿ ಮತ್ತು ದಲಿತರಿಗೆ ಶೇಕಡಾ 50ರಷ್ಟು ಮೀಸಲಾತಿ ನೀಡುವಂತೆ ಆದೇಶಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ನ ಆದೇಶಕ್ಕೆ ಸ್ಟಾಲಿನ್ ಪ್ರತಿಕ್ರಿಯಿಸುತ್ತಿದ್ದರು.

ಈ ನಿಟ್ಟಿನಲ್ಲಿ ನಾಲ್ಕು ಸದಸ್ಯರ ಸಮಿತಿ ರಚಿಸಬೇಕೆಂದು ತಮಿಳುನಾಡು ಸರ್ಕಾರ ಬಲವಾಗಿ ವಾದಿಸಲಿಲ್ಲ. ಆದ್ದರಿಂದ ಒಬಿಸಿ ಮತ್ತು ದಲಿತ ವಿದ್ಯಾರ್ಥಿಗಳ ಕನಸುಗಳು ಚೂರುಚೂರಾಗಿವೆ ಎಂದು ಸ್ಟಾಲಿನ್ ಆರೋಪಿಸಿದ್ದಾರೆ.

ಮೂರು ವರ್ಷಗಳಿಂದ ಕೇಂದ್ರ ಕೋಟಾದಲ್ಲಿ ಒಬಿಸಿ ಮತ್ತು ದಲಿತರಿಗೆ ಮೀಸಲಾತಿ ನೀಡಲಾಗಿಲ್ಲ. ಇದು ದೇಶಾದ್ಯಂತ 10,000 ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿದೆ ಎಂದು ಸ್ಟಾಲಿನ್ ಹೇಳಿದ್ದಾರೆ.

ABOUT THE AUTHOR

...view details