ಕರ್ನಾಟಕ

karnataka

ETV Bharat / bharat

ಎಲ್ಲಾ ರಾಜ್ಯಗಳು ದೆಹಲಿ ಮಾದರಿಯನ್ನು ಅನುಸರಿಸಿ: ಕೇಂದ್ರ ಸರ್ಕಾರ - ದೆಹಲಿಯಲ್ಲಿ ಶೇ.84 ಮಂದಿ ಕೋವಿಡ್‌ನಿಂದ ಗುಣಮುಖ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶೇಕಡಾ 84 ರಷ್ಟು ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ. ಹೀಗಾಗಿ ದೇಶದ ಎಲ್ಲಾ ರಾಜ್ಯಗಳು ದೆಹಲಿ ಮಾದರಿಯನ್ನು ಅನುಸರಿಸಬೇಕು ಎಂದು ಕೇಂದ್ರ ಸಚಿವ ಕಿಶನ್‌ ರೆಡ್ಡಿ ತಿಳಿಸಿದ್ದಾರೆ. ಅಲ್ಲದೆ, ದೆಹಲಿ ಸರ್ಕಾರವನ್ನು ಪ್ರಶಂಸಿದ್ದಾರೆ.

Should Follow Delhi Model: Union Minister's Praise Over Covid Outbreak
ಎಲ್ಲಾ ರಾಜ್ಯಗಳು ದೆಹಲಿ ಮಾದರಿಯನ್ನು ಅನುಸರಿಸಿ: ಕೇಂದ್ರ ಸರ್ಕಾರ

By

Published : Aug 1, 2020, 6:18 PM IST

ದೆಹಲಿ: ಕೊರೊನಾ ವೈರಸ್‌ ನಿಯಂತ್ರಣ ವಿಚಾರದಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ದೆಹಲಿ ಸರ್ಕಾರವನ್ನು ಕೇಂದ್ರ ಸರ್ಕಾರ ಪ್ರಶಂಸಿದೆ.

ಎಲ್ಲಾ ರಾಜ್ಯಗಳು ದೆಹಲಿಯ ಮಾದರಿಯನ್ನು ಅನುಸರಿಸಬೇಕು ಎಂದು ಕೇಂದ್ರದ ಗೃಹ ಇಲಾಖೆ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ ತಿಳಿಸಿದ್ದಾರೆ. ನಿಮಗೆ ಗೊತ್ತಾ ದೆಹಲಿ ಕೇಂದ್ರಾಡಳಿತ ಪ್ರದೇಶ. ನಾನು ವೈಯಕ್ತಿಕವಾಗಿ ಈ ಪ್ರದೇಶದ ಮೇಲೆ ನಿಗಾವಹಿಸಿದ್ದೇನೆ. ಶೇಕಡಾ 84 ರಷ್ಟು ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಹೀಗಾಗಿ ಎಲ್ಲಾ ರಾಜ್ಯಗಳು ಡೆಲ್ಲಿ ಮೊಡೆಲ್‌ ಅನ್ನು ಅನುಸರಿಸಿ ಎಂದಿದ್ದಾರೆ.

ಹೈದಾರಾಬಾದ್‌ನ ತೆಲಂಗಾಣ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ಅಂಡ್‌ ರಿಸರ್ಚ್‌-(TIMS) ನಲ್ಲಿ ಮಾತನಾಡಿರುವ ಸಚಿವರು, ದೆಹಲಿಯಲ್ಲಿ ಕೋವಿಡ್‌ನಿಂದ ಚೇತರಿಕೆಯ ಪ್ರಮಾಣವನ್ನು ದೇಶದ ಸರಾಸರಿ ಪ್ರಮಾಣಕ್ಕೆ ಹೋಲಿಸಿದರು. ದೇಶದಲ್ಲಿ ಶೇ.64.52ರಷ್ಟು ಮಂದಿ ಗುಣಮುಖರಾಗುತ್ತಿದ್ದಾರೆ.

3ನೇ ಹಂತದ ಲಾಕ್‌ಡೌನ್‌ಅನ್ನು ಮತ್ತಷ್ಟು ಸರಳಗೊಳಿಸುವ ಭಾಗವಾಗಿ ಸಿಎಂ ಕೇಜ್ರಿವಾಲ್‌ ಕೈಗೊಂಡಿದ್ದ 2 ನಿರ್ಧಾರವನ್ನು ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಾಲ್‌ ತಿರಸ್ಕರಿಸಿದ್ದರು ಎಂದಿದ್ದಾರೆ. ಸದ್ಯ ದೆಹಲಿ ನಗರ ಇದೀಗ ಕೊರೊನಾ ವೈರಸ್‌ ಸೋಂಕಿತ ಆ್ಯಕ್ಟಿವ್‌ ಪ್ರಕರಣಗಳ ಪಟ್ಟಿಯಲ್ಲಿ 11ನೇ ಸ್ಥಾನಕ್ಕೆ ಇಳಿದಿದೆ.

ABOUT THE AUTHOR

...view details