ಆಗ್ರಾ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಆಗ್ರಾ ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಈ ಮೊದಲು ಪ್ರಧಾನಿ ಮೋದಿ ಅವರಿಂದಲೇ ಪ್ರಶಂಸೆಗೆ ಒಳಗಾಗಿತ್ತು. ಆದರೆ, ಇದೀಗ ಇಲ್ಲಿನ ಕ್ವಾರಂಟೈನ್ನಲ್ಲಿ ಸೆರೆಹಿಡಿಯಲಾದ ವಿಡಿಯೋವೊಂದು ಆಗ್ರಾದ ನಿಜ ಬಣ್ಣ ಬಯಲು ಮಾಡಿದೆ.
ವಿಡಿಯೋದಲ್ಲಿ ಹೊರಗಿನಿಂದ ನಿಂತಿರುವ ವ್ಯಕ್ತಿ ಕ್ವಾರಂಟೈನ್ನಲ್ಲಿರುವವರಿಗೆ ನೀರು, ಬಿಸ್ಕೆಟ್ ಪ್ಯಾಕೆಟ್ಗಳನ್ನು ಹೊರಗಿನಿಂದ ಎಸೆಯುತ್ತಿರುವ ದೃಶ್ಯ ಸೆರೆಯಾಗಿದೆ.ಇದಲ್ಲದೇ ಹೊರಗಿರುವ ವ್ಯಕ್ತಿ ಅಗತ್ಯ ರಕ್ಷಣಾ ಕವಚ ಬಳಸಿರುವುದು ಕಂಡುಬಂದಿದೆ. ಆದರೆ ಕ್ವಾರಂಟೈನ್ನಲ್ಲಿರುವ ವ್ಯಕ್ತಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಒಬ್ಬರ ಮೇಲೊಬ್ಬರು ನೂಕುನುಗ್ಗಲಲ್ಲಿ ಆಹಾರ ಪದಾರ್ಥ ಕಿತ್ತುಕೊಳ್ಳಲು ಪ್ರಯತ್ನಸುತ್ತಿರುವುದು ಕಂಡುಬಂದಿದೆ.